ದಾವಣಗೆರೆ: ‘ನಾಟಕಗಳಲ್ಲಿ ಸಾಕಷ್ಟು ಸಂಖ್ಯೆಯ ಪುರುಷ ಕಲಾವಿದರು ಸ್ತ್ರೀ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಯಶಸ್ಸು ಸಾಧಿಸಿದ್ದಾರೆ. ಸ್ತ್ರೀ ಪಾತ್ರಗಳ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ, ಅಲ್ಲಿ ಹೆಸರು ಗಳಿಸಿದ ನಂತರ ಪುರುಷ ಪಾತ್ರಗಳಲ್ಲಿ ಮಿಂಚಿದ ಕಲಾವಿದರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಕವಯತ್ರಿ ಎಚ್.ಎಲ್. ಪುಷ್ಪಾ ಹೇಳಿದರು.

ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವೃತ್ತಿ ರಂಗಭೂಮಿ ರಂಗಾಯಣದಿಂದ ಆಯೋಜಿಸಿರುವ ರಂಗೋತ್ಸವದ ಅಂಗವಾಗಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ‘ವೃತ್ತಿ ರಂಗಭೂಮಿ ಮತ್ತು ಮಹಿಳೆ’ ವಿಷಯದ ಬಗ್ಗೆ ಅವರು ಮಾತನಾಡಿದರು.

‘ಕೆಲವು ಕಲಾವಿದರು ಪುರುಷ ಪಾತ್ರಕ್ಕಿಂತ ಸ್ತ್ರೀ ಪಾತ್ರದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದರು. ಹಾಡುಗಾರಿಕೆಯಿಂದಲೂ ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಪಾಶ್ಯಾತ್ಯದ ಪ್ರಭಾವ ಕನ್ನಡ ರಂಗಭೂಮಿ, ಭಾರತೀಯ ರಂಗಭೂಮಿ ಮೇಲೆ ಬೀರಿದೆ. ನಟನಾ ನೌಕರಿಯು ಪುರುಷರಿಗೆ ಬಂದಂತೆ ಸ್ತ್ರೀಯರಿಗೆ ಬರಲಿಲ್ಲ’ ಎಂದು ಹೇಳಿದರು.

‘ಮೊದಲ ತಲೆಮಾರಿನ ನಾಟಕ ಕಂಪನಿಗಳು ಸಾಕಷ್ಟು ಸವಾಲು ಎದುರಿಸಿದ್ದವು. ನಾಟಕಗಳಲ್ಲಿ ಸ್ತ್ರೀಯರ ಪ್ರವೇಶದ ಬಗ್ಗೆ ಸಾಕಷ್ಟು ಪರ– ವಿರೋಧದ ಚರ್ಚೆಗಳು ನಡೆದಿದ್ದವು. ಕಾಲಕ್ರಮೇಣ ಪ್ರೇಕ್ಷಕರನ್ನು ಸೆಳೆಯಲು ಸ್ತ್ರೀ ಪಾತ್ರಗಳಿಗೆ ಮಹಿಳೆಯರಿಗೇ ಅವಕಾಶ ದೊರೆಯಿತು’ ಎಂದರು.

‘ಹೆಣ್ಣುಮಕ್ಕಳು ಹಾಡುಗಾರಿಕೆ, ಲಾವಣ್ಯ, ಭಿನ್ನಾಣದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ನಟನೆಯೊಂದಿಗೆ ನಾಟಕ ಕಂಪನಿಗಳ ಮಾಲೀಕರಾಗಿಯೂ ಗುರುತಿಸಿಕೊಂಡರು. ನಟನೆ, ಮಾಲೀಕತ್ವ, ರಂಗಭೂಮಿಯ ಚಲನೆಯನ್ನು ನಿರ್ಧರಿಸುವಲ್ಲಿಯೂ ಮಹಿಳಾ ಕಲಾವಿದರು ಹಿಡಿತ ಸಾಧಿಸಿದರು. ದಾವಣಗೆರೆಯಲ್ಲಿ ಸಾಕಷ್ಟು ಕಲಾ ತಂಡಗಳಿದ್ದವು. ಹಲವು ನಾಟಕ ಕಂಪನಿಗಳು ಇಲ್ಲಿ ಮರು ಜನ್ಮ ಪಡೆದು, ಯಶಸ್ಸು ಸಾಧಿಸಿದ ಉದಾಹರಣೆಗಳಿವೆ’ ಎಂದರು.

ಬೆಂಗಳೂರಿನ ಎನ್.ಎಸ್.ಡಿ ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಅವರು ‘ಭಾರತೀಯ ವೃತ್ತಿ ರಂಗಭೂಮಿ’ ಬಗ್ಗೆ ವಿಷಯ ಮಂಡಿಸಿದರು. ‘ವೃತ್ತಿ ರಂಗಭೂಮಿಯ ನಾಟಕಗಳು ಹೆಚ್ಚು ಜನಸಾಮಾನ್ಯರಿಗೆ ತಲುಪುವಂತಹವು. ವೃತ್ತಿರಂಗಭೂಮಿ ಎಂದರೆ ಕೆಲವರಿಗೆ ಕೀಳರಿಮೆಯೂ ಇದೆ’ ಎಂದರು.

ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಅವರು ‘ಕರ್ನಾಟಕ ವೃತ್ತಿ ರಂಗಭೂಮಿ: ವರ್ತಮಾನದ ಸವಾಲುಗಳು’ ಕುರಿತು ವಿಷಯ ಮಂಡಿಸಿದರು.

ನಾಗರತ್ನಮ್ಮ ರಂಗಗೀತೆ ಹಾಡಿದರು. ದೇವಸೇನಾ ಡಿ.ಎಸ್. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-43-631767889

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.