ದಾವಣಗೆರೆ: ‘ವೃತ್ತಿ ರಂಗಭೂಮಿಯನ್ನು ನಂಬಿಕೊಂಡು ಜೀವನ ನಡೆಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ವೃತ್ತಿ ರಂಗಭೂಮಿಯು ಹೊಸತನದೊಂದಿಗೆ ನದಿಯಂತೆ ಹರಿಯುತ್ತಲೇ ಇದೆ’ ಎಂದು ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ ಅಭಿಪ್ರಾಯಪಟ್ಟರು.

ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಂಗೋತ್ಸವದ ಅಂಗವಾಗಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ‘ಕೊಂಕಣ ಪರಿಸರದ ವೃತ್ತಿ ರಂಗಭೂಮಿ’ ಕುರಿತು ವಿಷಯ ಮಂಡಿಸಿದರು.

‘10ನೇ ಶತಮಾನದಲ್ಲಿ ಕಲೆಯಾಗಿ ಪ್ರಾರಂಭವಾದ ವೃತ್ತಿ ರಂಗಭೂಮಿ ಈಗ ಹೊಸ ಆಯಾಮ ಪಡೆದುಕೊಂಡಿದೆ. ತಂತ್ರಜ್ಞಾನದ ನೆರವಿನಿಂದ ಹೊಸ ಪ್ರೇಕ್ಷಕರನ್ನೂ ತಲುಪುತ್ತಿದೆ’ ಎಂದರು.

‘ದೀರ್ಘವಾದ ಪರಿಕಲ್ಪನೆಯೊಂದಿಗೆ ಸಮಾಜದ ಗಂಭೀರ ವಿಚಾರಗಳನ್ನು ಪ್ರಸ್ತುತಪಡಿಸುವುದಕ್ಕೆ ನಾಟಕಗಳು ಪ್ರಖ್ಯಾತಿಯಾಗಿದ್ದವು. ಆಸಕ್ತಿ ಮೂಡಿಸುವಂತಹ ಕಿರುಚಿತ್ರಗಳು, ವೆಬ್ ಸೀರಿಸ್ಗಳ ಮೂಲಕವೂ ರಂಗಭೂಮಿ ಮತ್ತೆ ಹೊಸ ಹುಮ್ಮಸ್ಸಿನೊಂದಿಗೆ ಜೀವಂತವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೊಂಕಣಿ ಭಾಷೆ ಮತ್ತು ರಂಗಭೂಮಿಯು ದೇಶದಾದ್ಯಂತ ಗಾಢವಾದ ಪ್ರಭಾವ ಬೀರಿದೆ. ಕೊಂಕಣವು ಭಾರತದ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪ್ರದೇಶವಾಗಿದೆ. ಇದು ಮಹಾರಾಷ್ಟ್ರ, ಗೋವಾ, ಕರಾವಳಿ ಕರ್ನಾಟಕ ಮತ್ತು ತುಳುನಾಡನ್ನು ಒಳಗೊಂಡಿದೆ’ ಎಂದರು.

ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಅಂಕಣಕಾರ ಬಿ. ಚಂದ್ರೇಗೌಡ ಸಮಾರೋಪ ಭಾಷಣ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ದೇವಸೇನಾ ಡಿ.ಎಸ್. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-43-2012593637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.