ಧಾರವಾಡ: ‘ರಂಗಭೂಮಿಯು ನಾಟಕ, ಸಂಗೀತ ಹಾಗೂ ಸಾಹಿತ್ಯದ ಜ್ಞಾನ ನೀಡುತ್ತದೆ. ಸಾಂಸ್ಕೃತಿಕ, ಸಿನಿಮಾ ರಂಗದ ಕಲಾವಿದರು ಹಾಗೂ ತಂತ್ರಜ್ಞರ ಬೆಳವಣಿಗೆಗೆ ಅದುವೇ ಬುನಾದಿ’ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.

ನಗರದ ರಂಗಾಯಣದಲ್ಲಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಗುರುವಾರ ಮಾತನಾಡಿದ ಅವರು, ‘ರಂಗಭೂಮಿಯಲ್ಲಿ ಕಲಾವಿದರು ಸಕ್ರಿಯವಾಗಿ ತೊಡಗಿಸಿಕೊಂಡರೆ ಟಿವಿ, ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತವೆ. ಅಂಥ ಶಕ್ತಿ ರಂಗಭೂಮಿಗೆ ಇದೆ. ಯುವಜನರು ಸಿನಿಮಾವನ್ನಷ್ಟೇ ಕೇಂದ್ರಿಕರಿಸಿದ್ದಾರೆ’ ಎಂದರು.

‘ಮಕ್ಕಳು ಸಾಧನೆ ಮಾಡಬೇಕು ಎಂಬುದು ಎಲ್ಲ ಪೋಷಕರ ಆಶಯ. ಮಕ್ಕಳ ಮೇಲೆ ಒತ್ತಡ ಹೇರಬಾರದು. ಆಯ್ಕೆಗೆ ಅವಕಾಶ ನೀಡಬೇಕು. ಅವರ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು’ ಎಂದರು.

ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಝಕೀರ ನದಾಫ, ಶಿಬಿರದ ಸಂಚಾಲಕ ಅರುಣಕುಮಾರ ಮೇದಾರ, ಸಂಗೀತಗಾರ್ತಿ ಸುನಂದಾ ನಿಂಬನಗೌಡರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-24-1074459281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.