ಧಾರವಾಡ: ‘ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಮಾರ್ಚ್ 24ರಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಾಟಕೋತ್ಸವ ಮತ್ತು ವಿಚಾರ ಸಂಕಿರಣ ನಡೆಯಲಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯಿತ್ರಿ ಹಡಪದ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘24ರಂದು ಬೆಳಿಗ್ಗೆ 10 ಗಂಟೆಗೆ ‘ಕನ್ನಡ ರಂಗಭೂಮಿಯಲ್ಲಿ ಸಮಾಜವಾದಿ ಚಿಂತನೆಗಳ ಪ್ರಭಾವ ಮತ್ತು ಪರಿಣಾಮ’ ಗೋಷ್ಠಿ ನಡೆಯಲಿದೆ. ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ ಅವರು ವಿಷಯ ಮಂಡಿಸುವರು. ಚಿಂತಕ ಶಿವಾನಂದ ಶೆಟ್ಟರ್, ಸಾಹಿತಿ ಅನಸೂಯಾ ಕಾಂಬಳೆ, ಕವಯತ್ರಿ ಸವಿತಾ ನಾಗಭೂಷಣ ಹಾಗೂ ಕವಿ ಜೊಸೆಫ್ ಮಲ್ಲಾಡಿ ಪಾಲ್ಗೊಳ್ಳುವರು. ಮಧ್ಯಾಹ್ನ 12.30ಕ್ಕೆ ಧಾರವಾಡದ ಆಟಮಾಟ ತಂಡದವರು ಮಹಾದೇವ ಹಡಪದ ನಿರ್ದೇಶನದ ‘ಮತ್ತೊಬ್ಬ ಮಾಯಿ’ ನಾಟಕ ಪ್ರಸ್ತುತಪಡಿಸುವರು’ ಎಂದರು.

‘ಮಧ್ಯಹ್ನಾ 3 ಗಂಟೆಗೆ ‘ಮಕ್ಕಳ ರಂಗಭೂಮಿ ಸಾಧ್ಯತೆ ಹಾಗೂ ಸವಾಲುಗಳು’ ಗೋಷ್ಠಿ ನಡೆಯಲಿದೆ. ಶ್ರೀಪಾದ ಭಟ್ ವಿಷಯ ಮಂಡಿಸುವರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಂಗನಿರ್ದೇಶಕ ಕಲ್ಲಪ್ಪ ಪೂಜೇರ, ವಿಶ್ವೇಶ್ವರಿ ಹಿರೇಮಠ, ಮಂಜುನಾಥ ಬಗಲಿ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರಂಗ ನಿರ್ದೇಶಕ ಪ್ರಕಾಶ ಗರುಡ ಅವರ ಸಮಾರೋಪ ಭಾಷಣ ಮಾಡುವರು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು ಎಂದರು.

ರಾತ್ರಿ 7 ಗಂಟೆಗೆ ಮೈಸೂರಿನ ರಂಗಾಯಣ ತಂಡದವರು ಸವಿತಾ ರಾಣಿ ನಿರ್ದೇಶನದ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರಸ್ತುತಪಡಿಸುವರು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-24-1962280336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.