ದೊಡ್ಡಬಳ್ಳಾಪುರ: ಇಲ್ಲಿನ ಡಾ.ರಾಜ್ಕುಮಾರ್ ಕಲಾಮಂದಿರದಲ್ಲಿ ‘ಶಿವಯೋಗಿ ಸಿದ್ದರಾಮೇಶ್ವರ’ ನಾಟಕ ಪ್ರದರ್ಶನ ನಡೆಯಿತು.

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಸಹಯೋಗದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವದಲ್ಲಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಕಲಾವಿದರು ಪಂಡಿತಾರಾಧ್ಯ ಶಿವಾಚಾರ್ಯಸ್ವಾಮಿ ರಚನೆ, ಮತ್ತು ವೈ.ಡಿ.ಬದಾಮಿ ನಿರ್ದೇಶಿಸಿರುವ ನಾಟಕಕ್ಕೆ ಜೀವ ತುಂಬಿದರು.

ಕರ್ಮಯೋಗದಲ್ಲಿ ಕಳೆದು ಹೋಗುತ್ತಿದ್ದ ಸಿದ್ದರಾಮೇಶ್ವರ ಅವರನ್ನು ಅಲ್ಲಮಪ್ರಭು ಎಚ್ಚರಿಸಿದದು, ಕಲ್ಯಾಣದಲ್ಲಿ ಚನ್ನಬಸವಣ್ಣ ಅವರಿಂದ ಸಿದ್ದರಾಮೇಶ್ವರ ಇಷ್ಟಲಿಂಗ ದೀಕ್ಷೆ ಪಡೆದು ಶಿವಶರಣರಾಗಿದ್ದು.. ಹೀಗೆ ಸಿದ್ಧರಾಮೇಶ್ವರರ ಬದುಕನ್ನು ನಾಟಕ ತೆರದಿಟ್ಟಿತು.

ಕಲಾವಿದರಾದ ಬಸವರಾಜ ತಮ್ಮಣ್ಣ ಪೂಜಾರಿ, ವಿಶ್ವಾಸರೆಡ್ಡಿ,ಪ್ರವೀಣ ಕೊಪ್ಪಳ, ಸುನೀಲ ಕಲುಬುರಗಿ, ಉದಯಕುಮಾರ್, ದಿನೇಶ್ ಯರನಾಳೆ, ಎನ್.ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಎಸ್.ಎಸ್.ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ಧನ್. ಚಂದ್ರಕಲಾ, ನಾಗರತ್ನ, ದರ್ಶನ್ ಅಭಿನಯಿಸಿದರು.

ಎಚ್.ಎಸ್.ನಾಗರಾಜ್ ಮತ್ತು ಕೆ.ದಾಕ್ಷಾಯಣಿ ಅವರ ಸಂಗೀತ ಸಹಕಾರ, ಶರಣ್ ಕುಮಾರ್ ತಬಲ, ಆರ್.ಚಂದ್ರಮ್ಮ, ಬಸವರಾಜ ತಮ್ಮಣ್ಣ ಪೂಜಾರಿ, ಪ್ರಶಾಂತ್ ಸಂಗೀತ ನಿರ್ವಹಣೆ, ರಾಜು ಬಿ ಲಕ್ಕಮುತ್ತೇನಹಳ್ಳಿಬೆಳಕಿನ ವಿನ್ಯಾಸ, ದಿನೇಶ್ ಯರನಾಳ ರಂಗ ನಿರ್ವಹಣೆಯಲ್ಲಿ ನಾಟಕ ಅದ್ಬುತವಾಗಿ ಮೂಡಿ ಬಂತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-1735949569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.