ಗಂಗಾವತಿ: ನಗರದ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುಮುಖಿ ಸಾಂಸ್ಕೃತಿಕ ವೇದಿಕೆ, ಐಕ್ಯೂಎಸಿ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗ ಸಹಯೋಗದಲ್ಲಿ ಶ್ರೀ ಕೃಷ್ಣದೇವರಾಯ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲಕುಂದಿ ಮಾತನಾಡಿ, ‘ರಂಗಭೂಮಿ ನಮ್ಮ ಬದುಕಿನ ಕನ್ನಡಿ. ಅದು ಮನುಷ್ಯನ ವ್ಯಕ್ತಿತ್ವದ ವೈವಿಧ್ಯಮಯ ಸ್ವಭಾವಗಳನ್ನು ಪ್ರತಿನಿಧಿಸುತ್ತದೆ. ರಂಗಭೂಮಿಗೆ ಪ್ರೊತ್ಸಾಹ ನೀಡುವ ಅವಶ್ಯಕತೆಯಿದೆ’ ಎಂದರು.

‘ಪದವಿ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ದೇವರಾಯ ನಾಟಕ ಉತ್ತಮ ಅನುಭವ ನೀಡಲಿದೆ. ನಮ್ಮ ಭವ್ಯ ವಿಜಯನಗರ ಸಾಮ್ರಾಜ್ಯದ ವಿಖ್ಯಾತ ಚಕ್ರವರ್ತಿ ಶ್ರೀಕೃಷ್ಣ ದೇವರಾಯನ ಸಾಧನೆ, ಪರಾಕ್ರಮಗಳು ಇಂದಿನವರಿಗೆ ತಿಳಿಸಬೇಕಾಗಿದೆ. ನಮ್ಮ ಇತಿಹಾಸದ ಮಹತ್ವ ತಿಳಿಸಲು ನಾಟಕ ಪರಿಣಾಮಕಾರಿ ಮಾಧ್ಯಮ’ ಎಂದರು.

ಬಹುಮುಖಿ ಸಾಂಸ್ಕ್ರತಿಕ ವೇದಿಕೆಯ ಸಂಚಾಲಕಿ ಡಾ. ಮುಮ್ತಾಜ್ ಬೇಗಂ, ಪ್ರಾಚಾರ್ಯ ಎಸ್.ಜಿ.ಗುರಿಕಾರ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಗುಂಡೂರು ಪವನ್ ಕುಮಾರ, ಪವಿತ್ರಾ, ಬಸವರಾಜ ಗೌಡನಬಾವಿ, ಶ್ರೀಕೃಷ್ಣದೇವರಾಯ ನಾಟಕದ ಕಥೆ ನಿರ್ದೇಶಕ ಅನಂತಕುಮಾರ ದೊರೆ, ಪ್ರಸಾದನ, ವಸ್ತ್ರ ವಿನ್ಯಾಸಕಾರ ಶಂಕರ.ಕೆ, ಐಕ್ಯೂಎಸಿ ಸಂಚಾಲಕ ಮಂಜುನಾಥ ಕೆ.ಎಸ್, ಜೆ.ಕೃಷ್ಣ, ಅಣ್ಣೋಜಿರೆಡ್ಡಿ, ರವಿ ಹಾದಿಮನಿ, ಅಶೋಕ, ದೊರಬಾಬು, ಸುಮಲತಾ, ಸಲೀಂ, ಅನಿತಾ, ಮಣಿಕಂಠ, ಶಿವರಾಜ, ಮಂಜಣ್ಣ ಪೂಜಾರ, ಲಕ್ಷ್ಮೀಬಾಯಿ, ಬಾಲಪ್ಪ ಹುಲಿಹೈದರ್, ಉಷಾರಾಣಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-435988621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.