ಹಾಸನ: ಸೃಜನ ಸಿರಿ ಮಹಿಳಾ ಸಂಘದಿಂದ ಹಲವು ಕಲಾವಿದೆಯರನ್ನು ರಂಗ ಭೂಮಿಗೆ ಪರಿಚಯಿಸಿದ ನಿರ್ದೇಶಕಿ ಮಂಗಳ ವೆಂಕಟೇಶ್, ಕೋವಿಡ್–19 ಸಂದರ್ಭದಲ್ಲಿ ನಿಧನರಾಗಿದ್ದು, ಅವರ ಕಲಾ ಸೇವೆಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ಕದಂಬ ಸೈನ್ಯ, ಬೆನಕ ಕಲಾ ಸೌರಭ ಮತ್ತು ಶಾರದಾ ಕಲಾಸಂಘ ವತಿಯಿಂದ ಅವರ ಸಗೃಹದಲ್ಲಿ ಏರ್ಪಡಿಸಲಾಗಿತ್ತು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ‘ಮಂಗಳಾ ವೆಂಕಟೇಶ್ ಅವರು ಹಾಸನದ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ತಮ್ಮದೇ ಮಹಿಳಾ ತಂಡ ಕಟ್ಟಿ ಹಲವಾರು ಹೊಸ ನಾಟಕ ಪ್ರಯೋಗಿಸಿದ್ದರು. ಕಸಾಪ ಹಾಸನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿದ್ದರು. ತಾವೇ ನಾಟಕ ಬರೆದು ರಂಗದ ಮೇಲೆ ತಂದಿದ್ದಾರೆ. ಇವರ ಕಲಾಸೇವೆ ಸ್ಮರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದೆ ಶ್ವೇತಾ ಮೋಹನ್ ಮಾತನಾಡಿ, ಮಂಗಳಾ ಅವರೊಂದಿಗಿನ ತಮ್ಮ ಒಡನಾಟ, ನಟನೆಗೆ ನೀಡಿದ ಸ್ಫೂರ್ತಿ, ಮನೆಯಲ್ಲಿಯೇ ನಾಟಕ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು ನೆನೆದರು.

ಮಂಗಳಾ ಅವರ ಒಡನಾಟದಲ್ಲಿದ್ದ ಶಿಕ್ಷಕಿ ರಾಣಿ ಚರಾಶ್ರೀ, ಅವರ ನಿರ್ದೇಶನದಲ್ಲಿ ನಟಿಸಿದ ನಾಟಕಗಳ ಪಾತ್ರ, ಅವು ತಂದುಕೊಟ್ಟ ಹೆಸರು ಇಂದಿಗೂ ಸ್ಫೂರ್ತಿಯಾಗಿರುವುದನ್ನು ಸ್ಮರಿಸಿದರು.

ಪತ್ರಕರ್ತೆ ಲೀಲಾವತಿ, ತಮ್ಮ ಬಾಲ್ಯದ ಗೆಳತಿ ಮಂಗಳಾರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿ, ತಾವು ಎಲೆಮರೆಕಾಯಂತೆ ಇದ್ದು, ಮಂಗಳಾ ಮತ್ತು ಇತರ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಿದ್ದ ಬಗೆಯನ್ನು ತಿಳಿಸಿದರು.

ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಮನಸ್ಸು’ ಪುಸ್ತಕವನ್ನು ಇದೇ ಸಂದರ್ಭ ಗೊರೂರು ಅನಂತರಾಜು ಲೋಕಾರ್ಪಣೆ ಮಾಡಿದರು.

ಕೃತಿಯ ಕರ್ತೃ ಸೀತಮ್ಮ ಮಾತನಾಡಿ, ನಾನು ಗೊರೂರು ಅನಂತರಾಜು ಅವರ ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದೆ. ಸಾಹಿತ್ಯದ ತವರೂರು ಎನಿಸಿಕೊಂಡ ಹಾಸನವೇ ಈ ಎಲ್ಲ ಸಾಹಿತ್ಯ ಕೃಷಿಗೆ ಪ್ರೇರಣೆ. ಕೊಡಗಿನ ಆದಿಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಸಂಗೀತ, ಸಾಹಿತ್ಯ, ನಾಟಕ ಸೇವೆಗಳನ್ನು ವಿವರಿಸಿದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿಯಾಗಿದ್ದು, ಇತಿಹಾಸ, ನಿಘಂಟು, ಕವನ ಸಂಕಲನಗಳಲ್ಲದೇ ಇಂತಹ ವಿವೇಕ ಜ್ಞಾನ ಕೃತಿ ಹೊರತಂದಿದ್ದು ಮನಸ್ಸಿನ ಆಳವಾದ ವಿಷಯಗಳನ್ನು ಪ್ರಸ್ತುತಪಡಿಸಿರುವ ಕೃತಿ ಇದಾಗಿದೆ ಎಂದರು.

ಕದಂಬ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಎಚ್ ಗಣೇಶ್ ಅಂಕಪುರ ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ದಿಸೆಯಲ್ಲಿ ನಮ್ಮ ಸಂಘವು ಕಾರ್ಯಪ್ರವೃತ್ತವಾಗಿದೆ. ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡು, 1994 ರಿಂದಲೇ ಪೌರಾಣಿಕ ನಾಟಕಗಳಲ್ಲಿ ನಟಿಸುತ್ತ ಬಂದಿರುವುದಾಗಿ ತಿಳಿಸಿದರು.

ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ಗಾಯಕಿ ಕಲಾವತಿ ಮಧುಸೂದನ್, ಶಾರದಾ ಕಲಾ ಸಂಘದ ಅಧ್ಯಕ್ಷ ಎಚ್.ಜಿ. ಗಂಗಾಧರ್, ಹಾಸನ ಎಂ.ಸಿ.ಇ. ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸಿ.ವಿ. ವೆಂಕಟೇಶ್, ಕದಂಬ ಸೈನ್ಯ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಪಟ್ನ ವೆಂಕಟೇಗೌಡ ಉಪಸ್ಥಿತರಿದ್ದರು. ಜೆ.ಆರ್.ಶ್ರೀಕಾಂತ್ ಪ್ರಾರ್ಥಿಸಿದರು.

ಧನಲಕ್ಷ್ಮಿ, ಶಾರದ ಕಲಾಸಂಘ ಮತ್ತು ಬೆನಕ ಕಲಾಸಂಘದ ಮಹಿಳೆಯರು ಭಕ್ತಿಗೀತೆ, ಜಾನಪದ ಗೀತೆ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-36-117872936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.