ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ
ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕವು ಆಗಸ್ಟ್ 3ರಂದು ಶನಿವಾರ ಪ್ರದರ್ಶನಗೊಳ್ಳಲಿದೆ.
ಪಠ್ಯ ಆಕರ: ಎನ್.ಕೆ.ಹನುಮಂತಯ್ಯ, ಚಂದ್ರಶೇಖರ್ ಕೆ. ರಚನೆ, ವಿನ್ಯಾಸ ನಿರ್ದೇಶನ: ಲಕ್ಷ್ಮಣ್ ಕೆ.ಪಿ. ಡ್ರಮಟರ್ಗ್ ವಿ.ಎಲ್. ನರಸಿಂಹಮೂರ್ತಿ. ಬೆಳಕು: ಮಂಜುನಾರಾಯಣ, ಸಚಿನ್.
ಸ್ಥಳ: ರವೀಂದ್ರ ಕಲಾಕ್ಷೇತ್ರ ಸಮಯ: ಸಂಜೆ 7ಕ್ಕೆ. ಟಿಕೆಟ್ ದರ ₹150.
ಮಾಹಿತಿಗೆ: 72596 07639
ಶ್ರಮ ಸಂಸ್ಕೃತಿ ನಾಟಕೋತ್ಸವ
ಕಾಂ. ಸೂರ್ಯನಾರಾಯಣ ರಾವ್ ಜನ್ಮಶತಮಾನೋತ್ಸವ ಆಚರಣಾ ಸಮಿತಿಯಿಂದ ಆಗಸ್ಟ್ 6ರಂದು ಶ್ರಮ ಸಂಸ್ಕೃತಿ ನಾಟಕೋತ್ಸವ ಆಯೋಜಿಸಲಾಗಿದೆ.
ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆ: ಡಾ.ಪುರುಷೋತ್ತಮ ಬಿಳಿಮಲೆ. ಅತಿಥಿಗಳು: ನಟ ಪ್ರಕಾಶ್‌ರಾಜ್. ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ. ಉಪಸ್ಥಿತಿ: ಡಾ.ರಾಜಪ್ಪ ದಳವಾಯಿ.
ರಾಷ್ಟ್ರಕವಿ ಕುವೆಂಪು ಅವರ ನಾಟಕ ‘ಜಲಗಾರ’ ಪ್ರದರ್ಶನ. ರಂಗವಿನ್ಯಾಸ–ನಿರ್ದೇಶನ: ಮೈಕೋ ಶಿವಶಂಕರ್.ಸಂಗೀತ: ವಿ.ಎನ್.ಅಶ್ವತ್ಥ. ನಿರ್ವಹಣೆ: ಸಂಜೀವ್ ಕೊನ್ನೂರು. ಮಧ್ಯಾಹ್ನ 3ಕ್ಕೆ
ವಿಮಲಾರಣದಿವೆ ಮಹಿಳಾ ತಂಡ ಅಭಿನಯಿಸುವ ನಾಟಕ ‘ನ್ಯಾಯ ಕೇಳಿದ ನಿಂಗವ್ವ’. ರಚನೆ: ರಾಜಪ್ಪ ದಳವಾಯಿ. ಪರಿಕಲ್ಪನೆ, ನಿರ್ದೇಶನ: ಸಮುತಿ ಕೆ.ಆರ್. ನಿರ್ವಹಣೆ ಸಿ.ಕುಮಾರಿ. ಸಂಜೆ 4.30ಕ್ಕೆ ಕಾಂ. ಸೂರ್ಯನಾರಾಯಣ ರಾವ್ ಜೀವನಾಧಾರಿತ ನಾಟಕ ‘ಕಾಮ್ರೇಡ್ ಸೂರಿ’ . ರಚನೆ: ಡಾ.ರಾಜಪ್ಪ ದಳವಾಯಿ. ಸಂಗೀತ: ಡಿಂಗ್ರಿ ನರೇಶ್. ರಂಗವಿನ್ಯಾಸ, ನಿರ್ದೇಶನ: ಮಾಲತೇಶ ಬಡಿಗೇರ. ನಿರ್ವಹಣೆ: ಸೋಮಶೇಖರ್ ಮತ್ತು ಹು.ದಾ. ಮುತ್ತುರಾಜು. ಸಂಜೆ 6.30ಕ್ಕೆ.
ಕಲಾವಿದರ ಕುಟುಂಬಕ್ಕೆ ನೆರವಾಗಲು ಯಕ್ಷಗಾನ ಪ್ರದರ್ಶನ
ಯಕ್ಷಗಾನಂ ಗೆಲ್ಗೆ ಯಕ್ಷಾಭಿಮಾನಿ ಬಳಗ 5ನೇ ವರ್ಷ ಸಹಾಯಾರ್ಥ ಪ್ರಯುಕ್ತ ಐದು ನೊಂದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಸಹಾಯಹಸ್ತ ನೀಡಲು ಪೆರ್ಡೂರು ಮೇಳದೊಂದಿಗೆ ಆಗಸ್ಟ್ 3ರಂದು ಶನಿವಾರ ವಿವಿಧ ಪ್ರಸಂಗವನ್ನು ಪ್ರದರ್ಶಿಸಲಿದೆ.
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಕಚ ದೇವಯಾನಿ’. ಕಚ: ಉದಯ ಕಡಬಾಳ, ದೇವಯಾನಿ: ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಋಷಿಪರ್ವ: ಮಾಗೋಡು ಅಣ್ಣಪ್ಪ, ಶುಕ್ರಾಚಾರ್ಯ: ಜಾಗಳ್ಳಿ ನಿರಂಜನ, ದೇವೇಂದ್ರ: ಭಾಸ್ಕರ ಮರಾಠೆ.
ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಸುಭದ್ರಾ ಕಲ್ಯಾಣ. ಬಲರಾಮ: ಸುಬ್ರಹ್ಮಣ್ಯ ಚಿಟ್ಟಾಣಿ. ಕೃಷ್ಣ: ಕಾರ್ತಿಕ್ ಚಿಟ್ಟಾಣಿ. ಸನ್ಯಾಸಿ ಅರ್ಜುನ: ಪವನ ಸಾಣ್ಮನೆ. ಸತ್ಯಭಾಮೆ: ಶ್ರೀಧರ ಉಪ್ಪೂರು. ಸುಭದ್ರೆ: ಶ್ರೀಧರ್ ಕುಡ್ಲ. ದೂತ: ರವೀಂದ್ರ ದೇವಾಡಿಗ.
ದೇವಿದಾಸ ವಿರಚಿತ ಬಬ್ರುವಾಹನ ಪ್ರಸಂಗ: ಬಬ್ರುವಾಹನ: ಕಾರ್ತಿಕ್ ಕಣ್ಣಿಮನೆ. ಮಂತ್ರಿ: ಜಾಗನಹಳ್ಳಿ ನಿರಂಜನ. ದೂತ: ಪುರಂದರ ಮೂಡ್ಕಣಿ. ಚಿತ್ರಾಂಗದೆ: ಸಂತೋಷ್ ಕುಲಾಲ್. ಸಖಿ: ಶ್ರೀಧರ ಕುಡ್ಲ. ಅರ್ಜುನ: ವಿನಯ್ ಬೆರೊಳ್ಳಿ. ವೃಷಕೇತು: ಪವನ್ ಸಾಣ್ಮನೆ. ಪ್ರದ್ಯುಮ್ನ: ಭಾಸ್ಕರ್ ಮರಾಠೆ.
ಸ್ಥಳ: ರವೀಂದ್ರ ಕಲಾಕ್ಷೇತ್ರ. ರಾತ್ರಿ 10ಕ್ಕೆ
7ಕ್ಕೆ ‘ಧರ್ಮನಟಿ’
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅನುವಾದಿತ ನಾಟಕ ‘ಸೂರ್ಯಾ ಸ್ತದಿಂದ ಸೂರ್ಯೋದಯದವರೆಗೆ’ ರಂಗರೂಪಗೊಂಡು 90 ನಿಮಿಷಗಳ ಸಂಗೀತಮಯ ನಾಟಕ‘ಧರ್ಮನಟಿ’ಯಾಗಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ವಸ್ತು ಹೆಣ್ಣಿನ ಅಸ್ಮಿತೆಯನ್ನು ಪ್ರಶ್ನಿಸುತ್ತದೆಯಲ್ಲದೇ, ಅಂದಿನ ಹಾಗೂ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸಂಕೀರ್ಣತೆಯನ್ನು ಚರ್ಚಿಸುತ್ತದೆ. ಇದಲ್ಲದೇ ಪುರುಷ ಮತ್ತು ಸ್ತ್ರೀಯರ ಭಿನ್ನತೆ ಮತ್ತು ಅಪೂರ್ಣತೆ ಮೂಲಕ ಪೂರ್ಣತೆಯನ್ನು ಪಡೆಯುವ ಅವರ ಆಂತರಿಕ ಹೋರಾಟವನ್ನು ವಿಶ್ಲೇಷಿಸುತ್ತದೆ. ನಿರ್ದೇಶನ ಆಸಿಫ್ ಕ್ಷತ್ರಿಯ. ನಟನೆ: ಶ್ವೇತ ಶ್ರೀನಿವಾಸ. ಸಂಗೀತ: ಭಿನ್ನ ಷಡ್ಜ.
ಸ್ಥಳ: ರಂಗಶಂಕರ. ಸಂಜೆ 7.30ಕ್ಕೆ.
ಮಾಹಿತಿಗೆ: 8050157443
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.