ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಶಿವಕುಮಾರ ಕಲಾಸಂಘ, ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಬೆಂಗಳೂರಿನ ನಾಟಕ ಅಕಾಡೆಮಿ ವತಿಯಿಂದ ಮೇ. 17 ರಿಂದ ಜೂನ್ 5ರವರೆಗೆ ರಂಗ ತರಬೇತಿ ಶಿಬಿರ ನಡೆಯಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 20 ದಿನಗಳು ರಂಗತರಬೇತಿ ಶಿಬಿರ ನಡೆಯಲಿದ್ದು, ಶಿಬಿರಾರ್ಥಿಗಳು 18 ರಿಂದ 32 ವರ್ಷದೊಳಗಿನವರಾಗಿರಬೇಕು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ರಂಗಭೂಮಿಯಲ್ಲಿ ಅನುಭವವುಳ್ಳ ಕಲಾವಿದರು, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

₹ 500 ಪ್ರವೇಶ ಶುಲ್ಕವಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಅಥವಾ ವಾಟ್ಸ್ಆ್ಯಪ್ ಮಾಡಬಹುದು. ಅರ್ಜಿಗಳನ್ನು ಪ್ರಾಂಶುಪಾಲರು, ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೇಹಳ್ಳಿ, ಹೊಸದುರ್ಗ ತಾ. ಚಿತ್ರದುರ್ಗ ಜಿ. ವಿಳಾಸಕ್ಕೆ ಕಳುಹಿಸಬಹುದು. ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮೇ. 15 ಅರ್ಜಿ ಸಲ್ಲಿಸಲು ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ 9880872740, 9448398144 ಅಥವಾ 9480282791. ಅಥವಾ https://theatreschoolsanehalli.inಗೆ ಸಂಪರ್ಕಿಸಬಹುದು ಎಂದು ರಂಗಶಾಲೆಯ ಪ್ರಾಂಶುಪಾಲ ರಾಘು ಪುರಪ್ಪೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-1278310370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.