ಹೂವಿನಹಡಗಲಿ: ‘ದೂರದರ್ಶನ, ಮೊಬೈಲ್ ಹಾವಳಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬಯಲಾಟ ಕಲೆ ಬಡವಾಗಿದೆ’ ಎಂದು ಹಿರಿಯ ದೊಡ್ಡಾಟ ಕಲಾವಿದೆ ಎ.ಎಂ. ಹಾಲಯ್ಯ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರೇಶ್ವರ ಸಾಂಸ್ಕೃತಿಕ ದೊಡ್ಡಾಟ ಸಂಘ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಜಾನಪದ ರಂಗ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರ ಕೊರತೆ ಇದೆ. ಯುವಕರು ರಂಗಭೂಮಿಯ ಒಲವು ಬೆಳೆಸಿಕೊಂಡಿದ್ದು, ಈ ಕ್ಷೇತ್ರವನ್ನು ಕೂಡ ಬೆಳೆಸಬೇಕು’ ಎಂದು ತಿಳಿಸಿದರು.

ಮುಖಂಡ ಎಂ.ಬಿ.ಬಸವರಾಜ ಮಾತನಾಡಿ, ನಾಟಕ, ಬಯಲಾಟಗಳು ಜನರಿಗೆ ಮನರಂಜನೆ ಒದಗಿಸುವ ಜತೆಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಗ್ರಾಮೀಣ ಭಾಗದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ರಂಗಭೂಮಿಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಹಿರಿಯ ಕಲಾವಿದ ಮಲ್ಲಯ್ಯ ಗವಾಯಿ ಮಾತನಾಡಿದರು. ಕಲಾವಿದರಾದ ದೂಪದ ಕೊಟ್ರಪ್ಪ, ಗಚ್ಚಿನಮನಿ ಕೊಟ್ರಪ್ಪ, ಕೋಗಳಿ ಕುಬೇರಪ್ಪ, ಡಿ. ಹೊನ್ನೇಶ, ಎಚ್.ಕಲ್ಲೇಶ, ಸಿ.ನಾಗಭೂಷಣ ಇದ್ದರು.

ದೊಡ್ಡಾಟ ಕಲಾವಿದರಾದ ಬಿ. ಕಸ್ತೂರಪ್ಪ, ವೈ. ಕರಿಬಸಪ್ಪ ಬಯಲಾಟ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಕೋಗಳಿಯ ಕಲಾವಿದರು ಸಂಗ್ಯಾಬಾಳ್ಯ ಬಯಲಾಟ ಪ್ರಸ್ತುತಿಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-25-1434698026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.