ಕಲಬುರಗಿ: ರಂಗಾಯಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಸಮಾರೋಪವನ್ನು ಇದೇ 9ರಂದು ಆಯೋಜಿಸಲಾಗಿದ್ದು, ಅದೇ ದಿನದಿಂದ ಶುರುವಾಗಿ ಮೂರು ದಿನಗಳವರೆಗೆ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

ಅಂದು ಸಂಜೆ 5ಕ್ಕೆ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಸಮಾರಂಭ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ.ಪಾಟೀಲ, ಮೇಯರ್ ವರ್ಷಾ ಜಾನೆ ಭಾಗವಹಿಸುವರು.

ಸಂಜೆ 5.30ಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ರಚಿಸಿದ ಸಿದ್ದಪ್ಪ ಕಟ್ಟಿಮನಿ ನಿರ್ದೇಶಿಸಿದ ನಾಯಿ ತಿಪ್ಪ ನಾಟಕ ಪ್ರದರ್ಶನಗೊಳ್ಳಲಿದೆ.

ನಂತರ ನಕ್ಷತ್ರ ತಂಡದಿಂದ ಪಟ ಕುಣಿತ ನಡೆಯಲಿದೆ. ಭೂಮಿ ತಂಡದಿಂದ ಕೋಲಾಟ, ಸೂರ್ಯ ತಂಡದಿಂದ ಬಯಲಾಟ, ರಂಗಗೀತೆಗಳ ಪ್ರದರ್ಶನ ಜರುಗುವುದು.

ಮೇ 10ರಂದು ಸಂಜೆ 4.30ಕ್ಕೆ ಶ್ರೀನಿವಾಸ ದೋರನಹಳ್ಳಿ ರಚನೆಯ ನಾಟ್ಕದಾಗೊಂದು ನಾಟ್ಕ ಪ್ರದರ್ಶನಗೊಳ್ಳಲಿದ್ದು, ವಾಣಿಶ್ರೀ ಬಿ. ಮಾಳಗಿ ನಿರ್ದೇಶಿಸಿದ್ದಾರೆ. ನಂತರ ಕೋಟಿಗಾನಹಳ್ಳಿ ರಾಮಯ್ಯ ರಚನೆಯ, ಸಾಗರ ಘಾಳೆ, ಅಭಿಷೇಕ ಎಸ್.ಕೆ. ನಿರ್ದೇಶನದ ಡರ್ ಬುರ್ ಬುಡ್ಡಣ್ಣ ನಾಟಕ ಪ್ರದರ್ಶನಗೊಳ್ಳಲಿದೆ. ಚಂದ್ರ ತಂಡದಿಂದ ಕಂಸಾಳೆ ನೃತ್ಯ ಪ್ರದರ್ಶನ ನಡೆಯಲಿದೆ. ಭೂಮಿ ತಂಡದಿಂದ ಅಜ್ಜಿಯ ಜಂಬದ ಕೋಳಿ ನೃತ್ಯ, ಸೂರ್ಯ ತಂಡದಿಂದ ವಾದ್ಯ ಸಂಗೀತ, ರಂಗ ಗೀತೆ ಗಾಯನ ನಡೆಯಲಿದೆ.

11ರಂದು ಸಂಜೆ 5ಕ್ಕೆ ದಿನೇಶ ಗೌಡ ಕೆ. ರಚಿಸಿದ ಭಾಗ್ಯಶ್ರೀ ಬಿ. ಪಾಳಾ ನಿರ್ದೇಶನದ ಸಿಂಡ್ರೆಲಾ ನಾಟಕ ಪ್ರದರ್ಶನ ನಡೆಯಲಿದೆ. ನಂತರ ಸೂರ್ಯ ತಂಡದಿಂದ ಮಹಾಂತೇಶ ರಾಯಚೂರು ನಿರ್ದೇಶನದ ರಾಮ ರಾವಣರ ಯುದ್ಧ ಬಯಲಾಟ ಪ್ರದರ್ಶನಗೊಳ್ಳಲಿದೆ. ಆಕಾಶ ತಂಡದಿಂದ ಪುಣ್ಯಕೋಟಿ ದೃಶ್ಯ ರೂಪಕ, ನಕ್ಷತ್ರ ತಂಡದಿಂದ ಬೈತಿರೆ ಬರಿ ಬೈತಿರ್ ನೃತ್ಯ, ನಂತರ ವಿವಿಧ ತಂಡಗಳಿಂದ ಸಂವಿಧಾನದ ಪೀಠಿಕೆ ನೃತ್ಯ, ಚಂದ್ರ ತಂಡದಿಂದ ಮೈಮ್ ಜರುಗಲಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-34-2097750370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.