ಕಲಬುರಗಿ: ‘ಹಳ್ಳಿಗಳಲ್ಲಿ ಇನ್ನೂ ಕೂಡ ರಂಗಭೂಮಿ ಕಲೆ ಜೀವಂತವಾಗಿದ್ದು, ಅದು ಇಂದಿಗೂ ಜನರ ಜೀವನದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಶೇಖರ ಗೋನಾಯಕ ಹೇಳಿದರು.

ಕಲಬುರಗಿಯ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹವ್ಯಾಸಿ ಕಲಾವಿದರು ಹಾಗೂ ನಾಟಕ ಮಂಡಳಿಗಳು ಜಾತ್ರೆಗಳಲ್ಲಿ ನಾಟಕಗಳ ಮೂಲಕ ಜನರಿಗೆ ಮನರಂಜನೆ ನೀಡುವುದರ ಜೊತೆಗೆ ಸಮಾಜಮುಖಿ ಸಂದೇಶಗಳನ್ನು ಸಾರುತ್ತಿವೆ. ಹೀಗಾಗಿ ರಂಗಭೂಮಿ ಕಲೆಯು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ‘ಕಲಾವಿದನು ತನ್ನ ಅಭಿನಯದ ಮೂಲಕ ಸಂತೋಷ, ದುಃಖ, ಕೋಪ, ಭಯ ಸೇರಿದಂತೆ ನವರಸಗಳನ್ನು ಜೀವಂತವಾಗಿ ಮೂಡಿಸಿದಾಗ ಮಾತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಾಹಿತಿ ನಾಗೇಂದ್ರ ಮಸೂತಿ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಪ್ರಾಧ್ಯಾಪಕ ಬಸವರಾಜ ಭಾಗಾ, ಕಲ್ಯಾಣ ಕರ್ನಾಟಕ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು. ಸಾಹಿತಿ ಕೆ. ಗಿರಿಮಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಯಮಿ ವಿನೋದಕುಮಾರ ಪಾಟೀಲ ಸರಡಗಿ, ಶಿವಕುಮಾರ್ ಹಿರೇಗೌಡ, ಉಮೇಶ ಸಿದ್ದಣಗೋಳ ಕಡಣಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಅಧ್ಯಕ್ಷತೆ ವಹಿಸಿದ್ದರು.

ರಂಗ ಕಲಾವಿದರಾದ ವೀರಣ್ಣಗೌಡ ಪಾಟೀಲ, ಶರಣಗೌಡ ನಂದೂರ, ನಾಗಣ್ಣ ಕುರಕೋಟಿ, ಜಗದೇವಪ್ಪ ಹತ್ತರಕಿ, ಷಣ್ಮುಖ ಹುಗ್ಗಿ, ಶಂಕರ ವೇಷಗಾರ, ಶ್ಯಾಮರಾವ ಕೊರವಿ, ಸುನೀಲ ನಿರ್ಣಿ, ಮಲ್ಲಿಕಾರ್ಜುನ ಭಜಂತ್ರಿ, ಸಿದ್ದಪ್ಪ ಹೂಗಾರ, ನಾನಾ ಸಾಹೇಬ್ ಶಹಾಬಾದ್, ಗಣಪತರಾವ್ ಕಾಳಗಿ, ಭಾಗ್ಯಶ್ರೀ ಪಾಳಾ, ರಾಜಕುಮಾರ ಉದನೂರ, ರವಿ ಹಡಲಗಿ ಮಾಶ್ಯಾಳ, ಹರಿಶ್ಚಂದ್ರ ರಾಠೋಡ, ರಾಜಕುಮಾರ ಸೇರಿದಂತೆ 18 ಜನ ರಂಗಕರ್ಮಿಗಳಿಗೆ ‘ವಿಶ್ವ ರಂಗ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

ಚಾಮರಾಜ ದೊಡ್ಡಮನಿ ನಿರೂಪಿಸಿದರು. ನಾಗರಾಜ್ ಕಲ್ಲಾ ಸ್ವಾಗತಿಸಿದರು. ಸಿದ್ದಣಗೌಡ ಕಡಣಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-34-2086651613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.