ಕೆಜಿಎಫ್: ಬೆಮಲ್ ಸಮುದಾಯ ಸಂಘಟನೆಯಿಂದ ಕನ್ನಡ ಮಿತ್ರರು ಸಭಾಂಗಣದಲ್ಲಿ ಶುಕ್ರವಾರ ವಿಶ್ವ ರಂಗಭೂಮಿ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಂಗಕರ್ಮಿ ಅಚ್ಯುತ್, ರಂಗಭೂಮಿ ಯಾವಾಗಲೂ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ. ರಂಗಭೂಮಿಗೆ ಯಾವುದೇ ಗಡಿ, ಭಾಷೆ ಹಂಗಿಲ್ಲ. ಜನರ ನೋವಿಗೆ ರಂಗಭೂಮಿ ಸದಾ ಧ್ವನಿಯಾಗಬೇಕು. ಕಲೆ ಕಲೆಗಾಗಿ ಅಲ್ಲ, ಅದು ಜನರ ಬದುಕಿಗೆ ಸ್ಪಂದಿಸಬೇಕು. ಇವತ್ತಿನ ಯುದ್ಧ ಮತ್ತು ಅದರ ಆಗುಹೋಗು ನೋಡಿ ರಂಗಭೂಮಿ ಸುಮ್ಮನಿರಬಾರದು. ನಾಟಕವೆಂದರೆ ಸುಳ್ಳಿನ ಮೂಲಕ ನಿಜವನ್ನು ಹೇಳುವುದಾಗಿದೆ. ಸಾಮಾಜಿಕ ಅನಿಷ್ಟಗಳಿಗೆ ಕಲಾವಿದರು ಪ್ರತಿ ಸ್ಪಂದನೆ ನೀಡಬೇಕು ಎಂದರು.

ಕಾರ್ಮಿಕ ಮುಖಂಡ ಕುಬೇರಪ್ಪ ಮಾತನಾಡಿ, ರಂಗಭೂಮಿ ಎನ್ನುವುದು ಸಮಾಜದ ಕನ್ನಡಿ. ಇಲ್ಲಿ ಕಲಾವಿದರ ಭಾವನೆ, ಜೀವನದ ನಿಜಾಂಶ ನಮ್ಮ ಮುಂದೆ ಜೀವಂತವಾಗುತ್ತದೆ. ಒಂದು ಉತ್ತಮ ನಾಟಕ ಸಮಾಜದಲ್ಲಿ ಚಿಂತನೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ನಾಟಕಕಾರ ವಿಲಿಯಂ ಡಫೋ ಅವರು ಬರೆದ ವಿಶ್ವ ರಂಗಭೂಮಿ ಸಂದೇಶವನ್ನು ವಾಚನ ಮಾಡಲಾಯಿತು. ಜಗದೀಶ ನಾಯಕ ಬರೆದು ನಿರ್ದೇಶಿಸಿದ ‘ಯುದ್ಧ’ ಕಿರುನಾಟಕ ಪ್ರದರ್ಶಿಸಲಾಯಿತು. ಮಕ್ಕಳಿಂದ ರಂಗರೂಪಕ ಮತ್ತು ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾನನ್ ಸಹಾರಿಯಾ ಅವರು ಅಸ್ಸಾಂ ಮೂಲದ ಬಿಹು ನೃತ್ಯ ಪ್ರದರ್ಶಿಸಿದರು. ಜನಾರ್ಧನ, ರವೀಂದ್ರ, ಸುಮಾ, ಚಿತ್ರಾ, ಲಾವಣ್ಯ, ಫ್ಲೋರಾ, ನಾರಾಯಣಸ್ವಾಮಿ, ಅಲಿಕ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-18-1965469633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.