ಗೋಣಿಕೊಪ್ಪಲು: ವಿಶ್ವ ರಂಗಭೂಮಿಯ ದಿನದ ಹಿನ್ನೆಲೆಯಲ್ಲಿ ಕೊಡಗಿನ ರಂಗಭೂಮಿಯ ಕಡೆ ಒಂದು ಹಿನ್ನೋಟ ಬೀರಿದರೆ ಅದು 1960ರ ದಶಕದವರೆಗೂ ಹೊರಳುತ್ತದೆ.

1965ರ ವೇಳೆಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಮೂಲಕ ಕೊಡಗಿಗೆ ಬಂದ ರಂಗ ನಾಟಕಗಳು ಇಲ್ಲಿನ ಜನರಿಗೆ ನಾಟಕದ ಅಭಿರುಚಿ ಮೂಡಿಸುವಲ್ಲಿ ಸಫಲವಾದವು. ಬಳಿಕ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಒಲವು ಹೊಂದಿದ್ದ ಇಂಗ್ಲಿಷ್ ಪ್ರಾಧ್ಯಾಪಕ ಎಸ್.ಆರ್.ರಮೇಶ್ ಮತ್ತು ಗೆಳೆಯರು ಸೇರಿ ಸ್ಪಂದನ ನಾಟಕ ತಂಡ ಕಟ್ಟಿದರು.

ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಬಿಡುವಿನ ಅವಧಿಯಲ್ಲಿ ಅಭಿನಯಿಸುತ್ತಿದ್ದ ನಾಟಕ ಒಂದು ರಾಜ್ಯಮಟ್ಟದ ಯುವ ಜನ ಮೇಳದಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದುಕೊಂಡಿತು. ಇದರಿಂದ ಮತ್ತಷ್ಟು ಉತ್ಸುಕರಾದ ಅಧ್ಯಾಪಕರು ಲಂಕೇಶರ ತೆರೆಗಳು, ಕಾರ್ನಾಡರ ತೊಘಲಕ್, ರಮೇಶ್ ಅವರ ರಂಗಭಾರತ, ಕೀರ್ತಿನಾಥ ಕುರ್ತುಕೋಟಿಯವರ ಆ ಮನಿ ನಾಟಕ ನಾಟಕಗಳನ್ನು ಬೇರೆ ಬೇರೆ ಕಡೆಗಳಲ್ಲಿ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು.

ಮುಂದೆ 1980ರಲ್ಲಿ ಪೊನ್ನಂಪೇಟೆಯಲ್ಲಿ ಅಡ್ಡಂಡ ಕಾರ್ಯಪ್ಪ ಮತ್ತವರ ಗೆಳೆಯರ ನೇತೃತ್ವದಲ್ಲಿ ಸೃಷ್ಟಿಕೊಡಗು ರಂಗ ಉದ್ಭವಗೊಂಡಿತು. ಒಂದಷ್ಟು ವರ್ಷಗಳ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ತಂಡ ಹಲವು ಅತ್ಯುತ್ತಮ ನಾಟಕಗಳನ್ನು ಪ್ರೇಕ್ಷಕ ವರ್ಗಕ್ಕೆ ನೀಡಿತು.

ಇದರ ಜತೆಗೆ, ಹೆಗ್ಗೋಡಿನ ನಿನಾಸಂ ಸಂಸ್ಥೆಯಲ್ಲಿ ತರಬೇತಿ ಹೊಂದಿದ ರಾಧಾ ಕೊಡಗು, ಮಂಜು ಕೊಡಗು, ಕುಶಾಲನಗರದ ಭರಮಣ್ಣ ಬೆಟಗೇರಿ, ಮಡಿಕೇರಿಯ ಅಲ್ಲಾರಂಡ ವಿಠಲ ನಂಜಪ್ಪ ಅವರ ಮೂಲಕ ರಂಗಭೂಮಿ ಈಗಲೂ ಜೀವಂತವಾಗಿ ಉಳಿದುಕೊಂಡು ಬಂದಿದೆ.

ಮಾರ್ಚ್ 27 ವಿಶ್ವ ರಂಗಭೂಮಿ ದಿನ. 1961ರಲ್ಲಿ ಪ್ಯಾರಿಸ್ನಲ್ಲಿ ಇಂಟರ್ ನ್ಯಾಷನಲ್ ಥಿಯೇಟರ್ ಸಂಸ್ಥೆ–ಐಟಿಐ) ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ ಆರಂಭಗೊಂಡಿತು. 1962ರ ಮಾರ್ಚ್ 27ರಂದು ಪ್ಯಾರಿಸ್ನಲ್ಲಿ ‘ಥಿಯೇಟರ್ ಆಫ್ ನೇಷನ್ಸ್ ಉತ್ಸವ’ ನಡೆಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 27 ಅನ್ನು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಂಗಭೂಮಿಯ ಕಲೆಯ ಮೌಲ್ಯವನ್ನು ಜಗತ್ತಿನಾದ್ಯಂತ ಸಾರುವುದು ಮತ್ತು ಸತ್ಯ ದರ್ಶನ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೀಗಾಗಿ ಪ್ರತಿ ವರ್ಷ ಮಾರ್ಚ್ 27ರಂದು ಪ್ಯಾರೀಸ್ನಲ್ಲಿ ನಡೆಯುವ ವಿಶ್ವರಂಗ ಭೂಮಿ ದಿನಾಚರಣೆಯಲ್ಲಿ ಪ್ರಸಿದ್ಧ ರಂಗ ತಜ್ಞರನ್ನು ಕರೆಸಿ ಒಂದೊಂದು ಸಂದೇಶವನ್ನು ಸಾರಲಾಗುತ್ತದೆ. ಇಂಥ ಗೌರವ 2002ರಲ್ಲಿ ಕನ್ನಡ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಸಂದಿತ್ತು.

ರಂಗಭೂಮಿ ದಿನ: ಇಂದು ಹಲವೆಡೆ ಕಾರ್ಯಕ್ರಮ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರದ ಕೊಡಗು ವಿಶ್ವವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಗಳು ನಡೆಯಲಿವೆ.

ಕುಶಾಲನಗರದ ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ವಿವಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಮಾರ್ಚ್ 27ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ನಡೆಯಲಿದೆ. ಮೈಸೂರಿನ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಜಾಹಿದಾ ಕೊಡಗು, ಕೊಡಗು ಛಾಯಾಚಿತ್ರಕಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆವರ್ತಿ ಆರ್. ಮಹದೇವಪ್ಪ, ಕೊಡಗು ವಿವಿ ಕುಲಸಚಿವ ಎಂ.ಸುರೇಶ್ ಭಾಗಿಯಾಗಲಿದ್ದಾರೆ. ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ನೀನಾಸಂನ ಶಿಕ್ಷಕ, ರಂಗ ನಿರ್ದೇಶಕ ಪಿ.ಎ.ಮಂಜಪ್ಪ ಮಾಲ್ದಾರೆ ‘ರಂಗಭೂಮಿ ಎಂಬ ಚಿಕಿತ್ಸಕ ಮಾದರಿ’ ಕುರಿತು ಉಪನ್ಯಾಸ ನೀಡಲಿದ್ದಾರೆ. ‘ಕುಹೂ’ ಬೆಂಗಳೂರು ತಂಡದವರಿಂದ ರಂಗಸಂಗೀತವೂ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಡಿಕೇರಿಯ ಕೊಡಗು ಪತ್ರಿಕಾ ಭವನದಲ್ಲಿ ಅಲ್ಲಾರಂಡ ರಂಗ ಚಾವಡಿ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಮಾರ್ಚ್ 27ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ನಡೆಯಲಿದೆ.

ರಂಗಗೀತೆಗಳ ಗಾಯನ, ಶಿಕ್ಷಣದಲ್ಲಿ ರಂಗಭೂಮಿ ರಂಗಭೂಮಿಯಲ್ಲಿ ಶಿಕ್ಷಣ, ಭಾವೈಕ್ಯತೆಗೆ ರಂಗಭೂಮಿಯ ಅನಿವಾರ್ಯತೆ ಹಾಗೂ ಇನ್ನಿತರ ವಿಷಯಗಳನ್ನು ಕುರಿತ ಮಾತುಕತೆ, ಮುಕ್ತ ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.