ಕೋಲಾರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬದುಕಿನ ಅಪರೂಪದ ಘಟನಾಸರಣಿ ಆಧಾರಿತ ‘ಅಂಬೇಡ್ಕರ್ ಕೊಲಾಜ್’ ನಾಟಕವನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಪ್ರದರ್ಶಿಸಲಾಯಿತು.

ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಪಾಪರಾಜನಹಳ್ಳಿ ಬುಡ್ಡಿದೀಪ ಸಂಸ್ಥೆಯಿಂದ ಮೈಸೂರಿನ ರಂಗಾಯಣ ರೆಪರ್ಟರಿ ತಂಡ ಪ್ರಸ್ತುತಪಡಿಸಿದ ಈ ನಾಟಕ ನೋಡುಗರ ಗಮನ ಸೆಳೆಯಿತು. ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಚಿತ್ರಕಥೆ ರಚಿಸಿ ಸಂಭಾಷಣೆ ಬರೆದಿದ್ದಾರೆ.

ನಾಟಕ ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ‘ಅಂಬೇಡ್ಕರ್ ಅವರನ್ನು ವೈಚಾರಿಕ ಶಕ್ತಿಯಾಗಿ ರೂಪಾಂತರಿಸಿಕೊಂಡರೆ ಸಂವಿಧಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಶಕ್ತಿ ಬರುತ್ತದೆ’ ಎಂದರು.

ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಚುಂಬಕ ಶಕ್ತಿ ಇದೆ. ಸೂರ್ಯ ಚಂದ್ರ ಇರುವವರೆಗೂ ಅವರು ಅಜರಾಮರವಾಗಿರುತ್ತಾರೆ. ಅವರನ್ನು ಎಪ್ಪತ್ತು ವರ್ಷಗಳಿಂದಲೂ ಅರಾಧಿಸಿ, ಪ್ರೀತಿಸಿ, ಗೌರವಿಸಿಕೊಂಡು ಬರಲಾಗಿದೆ. ನಾಟಕದ ಸಂಭಾಷಣೆಯಲ್ಲಿ ಇರುವಂತೆ ಅಂಬೇಡ್ಕರ್ ಬರೆದ ಅಕ್ಷರಗಳನ್ನು ಮರೆತು, ಭಾವಚಿತ್ರಕ್ಕೆ ಸೀಮಿತವಾಗಿಸುವುದನ್ನು ಬಿಟ್ಟು ಈಗಲಾದರೂ ಅವರನ್ನು ವೈಚಾರಿಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ಈ ಬದಲಾವಣೆ ಆಗದಿದ್ದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ಕೊಲಾಜ್ ನಾಟಕದ ಸತ್ವ ಇರುವುದೇ ರಚನೆಕಾರ ಕೋಟಿಗಾನಹಳ್ಳಿ ರಾಮಯ್ಯ ಅವರ ಪರಿಕಲ್ಪನೆಯಲ್ಲಿ. ಅಂಬೇಡ್ಕರ್ ನಾಟಕ ಬರೆದು ಸೃಷ್ಟಿಸಿ ಒಪ್ಪಿಸುವುದು ಕಷ್ಟದ ಕೆಲಸ. ಅದರೂ ಯುವ ಪೀಳಿಗೆಯನ್ನೂ ತಲುಪುವಂತೆ ನಾಟಕವನ್ನು ಸಂಗೀತ, ಸಂಭಾಷಣೆ ಮೂಲಕ ನಿರೂಪಿಸಿರುವ ರಾಮಯ್ಯರ ಬರವಣಿಗೆಯನ್ನು ಅರ್ಥೈಸಿಕೊಂಡು ನಿರ್ದೇಶಕರು ಜಾಣ್ಮೆಯಿಂದ ನಾಟಕವನ್ನು ರೂಪಿಸಿದ್ದಾರೆ. ರಂಗಾಯಣದ ಪ್ರತಿಭಾವಂತ ಕಲಾವಿದರು ಅತಿ ರಂಜನೀಯವೆನಿಸದೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟಕದ ಪ್ರತಿ ದೃಶ್ಯವೂ ಒಂದೊಂದು ಪ್ರತ್ಯೇಕ ನಾಟಕವಾಗಬಹುದು. ಎರಡು ಗಂಟೆಗಳ ಅವಧಿಯಲ್ಲಿ ಅಂಬೇಡ್ಕರ್ ಅವರನ್ನು ಹಿಡಿದಿಟ್ಟಿರುವ ರಾಮಯ್ಯರಿಗೆ ವಂದನೆ. ಅವರು ಆಧುನಿಕ ಯುಗದಲ್ಲಿಯೂ ಕಳೆದುಹೋಗಿಲ್ಲ ಎನ್ನುವುದನ್ನು ಅಂಬೇಡ್ಕರ್ ಕೊಲಾಜ್ ನಾಟಕ ಸಾಬೀತುಪಡಿಸುತ್ತದೆ ಎಂದು ಅಭಿನಂದಿಸಿದರು.

ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಅಂಬೇಡ್ಕರ್ರ ವ್ಯಕ್ತಿತ್ವ, ಸಾಧನೆ, ಮಹಿಳಾ ಸಬಲೀಕರಣ ಹಾಗೂ ಸಮಾನತೆಗಾಗಿ ಅವರು ಶ್ರಮಿಸಿದ ಅಂಶಗಳನ್ನು ನಾಟಕ ಅರ್ಥಪೂರ್ಣವಾಗಿ ನಿರೂಪಿಸುತ್ತದೆ. ನೋಡುಗರನ್ನು ವಿಮರ್ಶೆಗೊಳಪಡಿಸಿ ಚಿಂತನೆಗೆ ದೂಡುವಂತೆ ಪ್ರೇರೇಪಿಸುತ್ತದೆ. ಅಂಬೇಡ್ಕರ್ ಕೊಲಾಜ್ ನಾಟಕವು ದೇಶದ ಎಲ್ಲಾ ಪ್ರಜ್ಞಾವಂತ ಮನಸ್ಸುಗಳಿಗೆ ತಲುಪಬೇಕಿದೆ. ಈ ಮೂಲಕ ಕೆ.ರಾಮಯ್ಯರ ಬುಡ್ಡಿದೀಪ ಸಂಸ್ಥೆಯು ಸಮಾಜ ಹಾಗೂ ಸಮುದಾಯಗಳನ್ನು ಬೆಳಗಬೇಕಿದೆ’ ಎಂದು ಆಶಿಸಿದರು.

ರಂಗಭೂಮಿ ನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದಲ್ಲಿ ಈ ನಾಟಕ ಮೂಡಿ ಬಂತು. ರಂಗ ವಿನ್ಯಾಸ ಎಚ್.ಕೆ.ದ್ವಾರಕನಾಥ್, ವಸ್ತ್ರ ವಿನ್ಯಾಸ ಪ್ರಮೋದ್ ಶಿಗ್ಗಾಂವ್, ರಂಗಸಜ್ಜಿಕೆ ಜನಾರ್ದನ್, ಪರಿಕರ ನಂದಿನಿ ಕೆ.ಆರ್. ಪ್ರಶಾಂತ್ ಹೆಬ್ಫಸೂರು, ಸಂಗೀತ ಚಂದ್ರಶೇಖರ್ ಆಚಾರ್ ಹೆಗ್ಗೋಠಾರ್ ಮತ್ತು ಶ್ರೀನಿವಾಸ್ ಭಟ್ (ಚೀನಿ), ಸಾಂಗತ್ಯ ಕೃಷ್ಣ ಚೈತನ್ಯ, ಪ್ರಕಾಶ್ ಪೂಜಾರಿ, ಸಿಂಚನ, ಬೆಳಕಿನ ವಿನ್ಯಾಸ ಮಹೇಶ್ ಕಲ್ಲತ್ತಿ, ಮತ್ತು ಅನಿಲ್ ರೇವೂರ ಸಹ ನಿರ್ದೇಶನ ಮಾಡಿದ್ದಾರೆ.

ಈ ವೇಳೆ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-18-669470475

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.