ಕುಶಾಲನಗರ: ‘ನಾಟಕ ಎಂಬುದು ಕೇವಲ ಮನರಂಜನೆಯ ಭಾಗ ಅಲ್ಲ; ಅದು ಸಮಾಜದ ಚಿಂತನೆ, ನೈತಿಕ ಬೋಧನೆಗಳನ್ನು ಅಗತ್ಯ ವಿಚಾರಗಳನ್ನು ನಮ್ಮ ಮನಸ್ಸಿನ ಆಳಕ್ಕೆ ಇಳಿಸುವ, ಹೃದಯಸ್ಪರ್ಶಿ ಪ್ರದರ್ಶನವನ್ನು ತೆರೆಯ ಮೇಲೆ ತರುವ ಕಲೆ. ಅಲ್ಲದೇ ರಂಗಭೂಮಿ ಸಮಾಜದ ಒಂದು ಜೀವಂತ ದರ್ಪಣ’ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.

ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ- ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ, ರಂಗಗೌರವ ಮತ್ತು ರಂಗಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿನಿಮಾ ಮತ್ತು ರಂಗಭೂಮಿಗೂ ಬಹಳಷ್ಟು ವ್ಯತ್ಯಾಸವಿದೆ. ರಂಗಭೂಮಿ ನಟನೆಯಲ್ಲಿ ಒಂದು ಜೀವಂತಿಕೆ ಇತ್ತು. ಆದರೆ ಇಂದು ಈ ಜೀವಂತಿಕೆಯ ನಟನೆಯನ್ನು ಕಾಣುವುದು ವಿರಳವಾಗಿದೆ’ ಎಂದು ವಿಷಾದಿಸಿದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಎಂ.ಸುರೇಶ್ ಮಾತನಾಡಿ, ‘ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದರು ಭವಿಷ್ಯದಲ್ಲಿ ಕಲೆ, ಸಂಗೀತ, ರಂಗಭೂಮಿ ಕ್ಷೇತ್ರಗಳು ಅವರ ಕೈಹಿಡಿಯುತ್ತವೆ’ ಎಂದರು.

ಬೆಂಗಳೂರಿನ ಕುಹೂ ತಂಡದ ಕಲಾವಿದೆ ಬಿಂದು ರಕ್ಷಿದಿ ಅವರು ಈ ವರ್ಷದ ವಿಶ್ವ ರಂಗಭೂಮಿ ದಿನಾಚರಣೆಯ ವಿಲಿಯಂ ಡೆಪೋ ಅವರ ಸಂದೇಶವನ್ನು ವಾಚಿಸಿದರು. ಹೆಗ್ಗೋಡಿನ ರಂಗನಿರ್ದೇಶಕರು ಮತ್ತು ನೀನಾಸಂ ಶಿಕ್ಷಕರು ಪಿ.ಎ ಮಂಜಪ್ಪ ಮಾಲ್ದಾರೆ ರಂಗಭೂಮಿ ಎಂಬ ಚಿಕಿತ್ಸಕ ಮಾದರಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬೆಂಗಳೂರಿನ ಕುಹೂ ತಂಡವು ರಂಗ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಿ.ಎ ಮಂಜಪ್ಪ ಮಾಲ್ದಾರೆ ಅವರನ್ನು ಸನ್ಮಾನಿಸಲಾಯಿತು. ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅವರ್ತಿ ಆರ್. ಮಹದೇವಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹಿದಾ ಕೊಡಗು, ಡಾ. ಜಮೀರ್ ಅಹಮದ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗುಣಶ್ರೀ ಬಿ. ಎಸ್, ವಿದ್ಯಾರ್ಥಿಗಳು ಕಲಾಸಕ್ತರು ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-51-361641935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.