ಗೋಣಿಕೊಪ್ಪಲು: ರಾಷ್ಟ್ರಕವಿ ಕುವೆಂಪು ರಚಿಸಿದ ಕಿಂದರಿ ಜೋಗಿ ನಾಟಕವನ್ನು ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿ ಗಿರಿಜನರ ಹಾಡಿಯ ಮಕ್ಕಳು ಮನೋಜ್ಞವಾಗಿ ಅಭಿನಯಿಸುವ ಮೂಲಕ ಪ್ರತಿಭೆಯಲ್ಲಿ ನಾಗರಿಕ ಪ್ರಪಂಚದ ಮಕ್ಕಳಿಗೆ ನಾವೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟರು.

ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ, ಮೈಸೂರು ರಂಗಯಾನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಕಲಾವಿದರು ಹಾಡು ಅಭಿನಯ, ಕುಣಿತ ಮೊದಲಾದವುಗಳ ಮೂಲಕ ಹಾಡಿಜನರನ್ನು ರಂಜಿಸಿದರು.

ರಂಗಕರ್ಮಿ ಬಿ.ವಿ.ಕಾರಂತ ಸಂಗೀತ ನಿರ್ದೇಶನದ ನಾಟಕವನ್ನು ವಿಕಾಸ್ ಚಂದ್ರ ನಿರ್ದೇಶನ ಮಾಡಿದ್ದರು.

ನಾಣಚ್ಚಿ ಗದ್ದೆ ಹಾಡಿಯ 25 ಮಕ್ಕಳ ಅಭಿನಯದಲ್ಲಿ ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಮೂಡಿಬಂದ ನಾಟಕದಲ್ಲಿ ಕೊಟ್ಟಮಾತಿಗೆ ತಪ್ಪಿದರೆ ಪರಿಣಾಮ ಗಂಭೀರವಾಗಿರುತ್ತದೆ ಎಂಬ ಸಂದೇಶವನ್ನು ಸಾರಲಾಯಿತು.

ರಂಗದ ಹಿಂದೆ ಮೈಸೂರು ರಂಗಯಾನ ಟ್ರಸ್ಟ್ ಪ್ರದರ್ಶನ ಕಲೆಗಳ ಅಧ್ಯಯನ ಕೇಂದ್ರದ ಡಿಪ್ಲೊಮೊ ವಿದ್ಯಾರ್ಥಿಗಳು ಸಹಕಾರ ನೀಡಿದರು.

ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ಜೆ.ಬಿ.ರಮೇಶ್ ಅವರ ನೇತೃತ್ವದಲ್ಲಿ ತಂಡದ ಸದಸ್ಯರಿಂದ ಜೇನುಕುರುಬರ ಆಚಾರ ವಿಚಾರ, ಸಂಸ್ಕೃತಿಯನ್ನು ಬಿಂಬಿಸುವ ಹಾಡು, ಕುಣಿತಗಳು ಅದ್ಬುತವಾಗಿ ಮೂಡಿಬಂದವು. ಡ್ರಮ್ ಸೇರಿದಂತೆ ತಗಡಿನ ವಾದನ ಬಳಸಿಕೊಂಡು ನುಡಿಸಿದ ತಾಳಗಳು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದವು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ರಾಮಕೃಷ್ಣಯ್ಯ ಅವರು ಒಲೆ ಹೊತ್ತಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರಂಗ ಭೂಮಿಯು ಮಕ್ಕಳಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿ, ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವಂತೆ ಮಾಡುತ್ತದೆ.

ರಂಗಭೂಮಿ ಬದುಕಿನ ಎಲ್ಲ ಮಜಲುಗಳಲ್ಲಿಯೂ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಹಾಡಿಗಳಲ್ಲಿ ಈ ರೀತಿಯ ಕಾರ್ಯಕ್ರಮ ಪ್ರತಿವರ್ಷವೂ ನಡೆಯುವಂತಾಗಬೇಕು ಎಂದರು.

ನಾಟಕ ನಿರ್ದೇಶಕ ವಿಕಾಸ್ ಚಂದ್ರ, ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ಜೆ.ಬಿ.ರಮೇಶ್, ಕುಟ್ಟ ಪೊಲೀಸ್ ಠಾಣೆಯ ಎಎಸ್ಐ ಕಾರ್ಯಪ್ಪ, ಮನು ಮಾತನಾಡಿದರು.

ಬೊಮ್ಮಾಡು ಹಾಡಿ ಮುಖಂಡರಾದ ಜೆ.ಕೆ.ಸೋಮಯ್ಯ, ಜೆ.ಬಿ.ಮನು, ನಾಣಚ್ಚಿ ಗದ್ದೆಹಾಡಿ ಮುಖಂಡ ಜೆ.ಕೆ.ಕಾಳ, ಹಾಡಿಯ ಯಜಮಾನ ಜೆ.ಕೆ.ತಿಮ್ಮ, ಕೊಡಂಗೆ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಣಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1802792702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.