ಮಡಿಕೇರಿ: ಇಲ್ಲಿನ ಪತ್ರಿಕಾಭವನ ಶುಕ್ರವಾರ ರಂಗಚಾವಡಿಯಾಗಿ ಪರಿವರ್ತನೆಯಾಯಿತು. ಕಂಚಿನ ಕಂಠದಲ್ಲಿ ಸುಮಾರು 10 ರಂಗಗೀತೆಗಳು ಅನುರಣಿಸಿದವು. ಕೊಡಗಿನಲ್ಲೇ ಅಪರೂಪ ಎನಿಸುವ ರಂಗಗೀತೆಗಳ ಗಾಯನ ಮೋಡಿ ಇಲ್ಲಿ ನಡೆದಿತ್ತು.

ಈ ದೃಶ್ಯಗಳು ಅಲ್ಲಾರಂಡ ರಂಗಚಾವಡಿ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಕಂಡು ಬಂತು.

ರಂಗಕರ್ಮಿ ಭರಮಣ್ಣ ಬೆಟಗೇರಿ ಅವರು, ಕವಿ ಎಚ್.ಎನ್.ಹುಗಾರ್ ಅವರ ‘ಆವ ಕವಿ ರಚಿಸಿದನು ಈ ಜಗದ ನಾಟಕವ’, ಚಂದ್ರಶೇಖರ ಕಂಬಾರ ಅವರ ‘ಕಾದ ಮೇದ ಹೆಣ್ಣ ನೀನ ನೋಡವಲ್ಲಿ ಕರೆಯೆತೇನಿ ಕಾಲಬಿದ್ದ ...ಬಾ ಬಾರಾ ಪೋರಿ ಕರೆಯೆತೇನಿ ಕಾಲಬಿದ್ದ...’ ಮೊಗಳ್ಳಿ ಗಣೇಶ್ ಅವರ ‘ಈ ಕೇಡುಗಾಲದ ಹೊತ್ತಿನಲ್ಲಿ ಹೇಳತೀನ್ರಿ ಒಂದು ಪದವ ಕೇಳಿ ಜನರೆ ಓ ನನ್ನ ಜನರೇ...’ ಎಂಬ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ಯೋಚನಾ ಲಹರಿಯ ಮೌನದ ತೆಕ್ಕೆಗೆ ಜಾರಿಸುವಲ್ಲಿ ಸಫಲರಾದರು.

ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಹಾಗೂ ರಂಗ ಕಲಾವಿದೆ ರಾಧಾ ಕೊಡಗು ರಂಗ ಗೀತೆಗಳನ್ನು ಹಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ನಿವೃತ್ತ ಉಪನ್ಯಾಸಕಿ ಕಲಿಯಂಡ ಸರಸ್ವತಿ, ‘ರಂಗಭೂಮಿ ಶಾಲಾ ಕಾಲೇಜುಗಳಿಗೆ ಅತಿ ಅವಶ್ಯಕವಾಗಿದೆ. ಮಕ್ಕಳಿಗೆ ಪಾಠಮಾಡುವಾಗ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಅಭಿನಯಿಸಿ ಪಾಠ ಮಾಡಿದರೆ ಹೇಳುವ ವಿಷಯ ಮಕ್ಕಳ ಮನಸ್ಸಿಗೆ ಬಹಳ ಬೇಗ ತಲುಪುತ್ತದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕಸಾಪದಿಂದ ಮಕ್ಕಳ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆ ಮೂಲಕ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರಂಗಭೂಮಿಯನ್ನು ಉಳಿಸಬೇಕಾಗಿದೆ’ ಎಂದರು.

ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ರಂಗಭೂಮಿಯ ಸಂರಕ್ಷಣೆ ಅತ್ಯವಶ್ಯವಾಗಿ ನಡೆಯಬೇಕಾಗಿದೆ’ ಎಂದು ಹೇಳಿದರು. ಲೇಖಕ ಜೆ.ಸೋಮಣ್ಣ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-51-939892089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.