ಮಾಲೂರು: ವಿಶ್ವಶಾಂತಿ ಹಾಗೂ ಸೌಹಾರ್ದತೆಗಾಗಿ ರಂಗಕಲೆ ಮೂಲಕ ಜಾಗೃತಿ ಮೂಡಿಸುತ್ತಿರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದೊಂದು ರಚನಾತ್ಮಕ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ ಅಭಿಪ್ರಾಯಪಟ್ಟರು.

ನಗರದ ಚೈತನ್ಯ ಕಲಾನಿಕೇತನ ಸಂಸ್ಥೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿ ಡಾ.ನಾ.ಮುನಿರಾಜು ಮಾತನಾಡಿ, ವಿಶ್ವ ರಂಗಭೂಮಿ ಪರಂಪರೆಗೆ ಅಕ್ಷರ ಬಾರದ ಮೌಖಿಕ ಸಮುದಾಯದ ಕೊಡುಗೆ ಅಪಾರ. ಭರತನ ನಾಟ್ಯ ಶಾಸ್ತ್ರದಿಂದ ಹಿಡಿದು ಪ್ರಾಚೀನ ಮಹಾಕಾವ್ಯಗಳಲ್ಲಿ ರಂಗಭೂಮಿ ಕುರಿತು ಉಲ್ಲೇಖಗಳಿವೆ ಎಂದು ತಿಳಿಸಿದರು.

ಚೈತನ್ಯ ಕಲಾನಿಕೇತನ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜಯಮಂಗಲ ಚಂದ್ರಶೇಖರ್, ರಂಗಕಲೆ ಉದ್ದೇಶ ಕೇವಲ ಮನರಂಜನೆ ಅಲ್ಲ. ಅದೊಂದು ಸಮಾಜವನ್ನು ತಿದ್ದುವ ಕಲಾ ಪ್ರಕಾರ. 1961ರಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಾರಂಭವಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಕೆ ಹಾಗೂ ನಾಟಕ ಎಂಬ ಪ್ರಕಾರಗಳ ಮೂಲಕ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು ಎಂದು ತಿಳಿಸಿದರು.

ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ನಾರಿಗಾನಹಳ್ಳಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಲೂರು ತಾಲೂಕು ಅಧ್ಯಕ್ಷ ಎಂ.ವಿ. ಹನುಮಂತಯ್ಯ ಉದ್ಘಾಟಿಸಿದರು.

ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ನಂಜುಂಡಪ್ಪ(ಪಾಸ್ವಾನ್), ನಿವೃತ್ತ ಉಪನ್ಯಾಸಕ ಎ.ಜಿ.ಕೃಷ್ಣಯ್ಯ, ನಿವೃತ್ತ ಶಿಕ್ಷಕರಾದ ಬಹದ್ದೂರ್ ಸಾಬ್, ಪಿ.ಎಂ ಕೃಷ್ಣಪ್ಪ, ಎಂ.ಪಿ.ರಾಜು, ರಾಧಾ ರುಕ್ಮಿಣಿ, ಶಿಕ್ಷಕರಾದ ಎನ್.ಎಸ್.ಮಾಲತಿ, ಚಂದ್ರಕಲಾ, ಯೋಗಗುರು ಎಲ್.ವೆಂಕಟೇಶ್, ಗ್ರಂಥಪಾಲಕ ನಾರಾಯಣಪ್ಪ, ಕಲಾವಿದ ಸರ್ವೇಶ್ ನಾಗೊಂಡಹಳ್ಳಿ, ಕವಿ ಮಾ.ಚಿ. ನಾಗರಾಜ್ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆದ ರಂಗಗೀತೆಗಳ ಗಾಯನಗೋಷ್ಠಿಯಲ್ಲಿ ಶಿಕ್ಷಕರಾದ ರಾಜಶೇಖರ್, ಮಂಜುನಾಥ್, ಶ್ರೀನಿವಾಸ್ ಚಿಕ್ಕಮಲ್ಲೆ, ನಾರಾಯಣಸ್ವಾಮಿ ಚಾಕನಹಳ್ಳಿ, ಶ್ರೀನಿವಾಸ್ ಅಬ್ಬೇನಹಳ್ಳಿ, ಮಹೇಶ್ ತಿಮ್ಮನಾಯಕನಹಳ್ಳಿ ಮುಂತಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-1206933705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.