ಕೆ.ಆರ್.ಪೇಟೆ: ಪೌರಾಣಿಕ ನಾಟಕಗಳು ಕೇವಲ ದೇವರ ಕಥೆ ಮಾತ್ರವಲ್ಲ; ಅದು ಜನರಿಗೆ ನೈತಿಕ ಮಾರ್ಗತೋರುವ ಸಾಮಾಜಿಕ ಸಂದೇಶ ಸಾರುವ ನಿದರ್ಶನವಾಗಿವೆ ಎಂದು ಬೇಬಿಬೆಟ್ಟದ ಶಿವಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬೂಕನಕೆರೆ ಹೋಬಳಿಯ ದೊಡ್ಡಯಾಚೇನಹಳ್ಳಿ ಗ್ರಾಮದಲ್ಲಿ ರಂಗದ ಹಬ್ಬ ಮತ್ತು ಜಗಜ್ಯೋತಿ ಬಸವಶ್ವರರ ಜಯಂತಿ ಅಂಗವಾಗಿ ಗ್ರಾಮದ ಬಶವೇಶ್ವರರ ಕೃಪಾಪೋಷಿತ ನಾಟಕ ಮಂಡಳಿ ಮತ್ತು ಡಾ.ರಾಜ್ ರಂಗ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾಭಾರತ-ರಾಮಾಯಣ ನಾಟಕಗಳಲ್ಲಿ ಬರುವ ಧರ್ಮರಾಯನ ಧರ್ಮನಿಷ್ಠೆ, ಶ್ರೀರಾಮನ ಪಿತೃವಾಕ್ಯ ಪರಿಪಾಲನೆ, ಕರ್ಣನ ದಾನಶೂರತೆ, ಹರಿಶ್ಚಂದ್ರನ ಸತ್ಯನಿಷ್ಠೆಯು ಮನುಷ್ಯ ಧರ್ಮಕ್ಕಾಗಿ ನಿಲ್ಲಬೆಕೆಂಬ ಸಂದೇಶ ಸಾರುತ್ತವೆ. ಯಾರು ಏನೇ ಮಾಡಿದರೂ ಅಂತಿಮವಾಗಿ ಧರ್ಮಕ್ಕೆ ಜಯ ಇದೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಪೌರಾಣಿಕ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದ್ದು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ನಾಟಕಗಳು ಸಮಾಜದ ಕನ್ನಡಿ ಇದ್ದಂತೆ. ನಾವು ಮಾಡಿದ ತಪ್ಪು, ಕೆಡಕು ಮತ್ತು ಒಳಿತನ್ನು ತಿಳಿಸಿ ಏನು ಮಾಡಿದ್ದರೆ ಸಮಾಜಕ್ಕೆ, ಕುಟುಂಬಕ್ಕೆ ಉಪಯುಕ್ತವಾಗುತ್ತಿತ್ತೆಂಬುದನ್ನು ತಿಳಿಸುತ್ತದೆ’ ಎಂದರು

ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಸಂಸ್ಥೆಯ ಅಧ್ಯಕ್ಷ ಬಲದೇವ್, ತಾಲ್ಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಪ್ರಮುಖರಾದ ಮಂಚೀಬೀಡು ಬಸವಲಿಂಗಪ್ಪ, ಚೋಕನಹಳ್ಳಿಯ ಮಹಾದೇವಪ್ಪ, ಪ್ರಕಾಶ್, ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ರಾಗಿ ಮುದ್ದನಹಳ್ಳಿ ದೇವರಾಜ್, ರಂಗಭೂಮಿ ಕಲಾವಿದರಾದ ತಂದ್ರೆ ಮಂಜು, ಹೊಸಹೊಳಲು ರಘು ಸೇರಿದಂತೆ ಹಲವು ಮುಖಂಡರು, ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-40-1015590022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.