ಮಂಡ್ಯ: ಸಾಹಿತಿ ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ಪ್ರಸಿದ್ಧ ಕನ್ನಡ ನಾಟಕ ‘ವರ್ಣಪಲ್ಲಟ’ವು ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಮರ್ಯಾದೆಗೇಡು ಹತ್ಯೆಯಂತಹ ಗಂಭೀರ ವಿಷಯಗಳ ಮೇಲೆ ಬೆಳಕು ಚೆಲ್ಲಿತು.

ಕರ್ನಾಟಕ ಸಂಘವು ನಗರದ ಪಿಇಎಸ್ ಕಾಲೇಜು ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ‘ವರ್ಣ ಪಲ್ಲಟ’ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ‘ಅನಾವರಣ’ ಕಲಾವಿದರ ಪ್ರಸ್ತುತಿ ಹಾಗೂ ಶಶಿಧರ್ ಭಾರಿಘಾಟ್ ಅವರ ವಿನ್ಯಾಸ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರ ಕರತಾಡನದ ಮೆಚ್ಚುಗೆಯೂ ಸಿಕ್ಕಿತು.

ಸಮಕಾಲೀನ ಸಮಾಜದಲ್ಲಿ ಬೇರೂರಿರುವ ಜಾತಿ ತಾರತಮ್ಯ ಮತ್ತು ಅಸಮಾನತೆಯನ್ನು ಸಾಂವಿಧಾನಾತ್ಮಕ ಚಿಂತನೆ ಹಾಗೂ ಪ್ರೇಮ-ರಾಜಕೀಯದ ಹಿನ್ನೆಲೆಯಲ್ಲಿ ಈ ನಾಟಕ ವಿಮರ್ಶಿಸಿತು. ಮೇಲ್ವರ್ಗದ ರಾಧಾ ಮತ್ತು ತಳ ಸಮುದಾಯದ ಮಾಧವ ಎಂಬ ಪ್ರೇಮಿಗಳ ಕಥೆಯ ಮೂಲಕ ಪ್ರಸ್ತುತ ಕಾಲದ ‘ಮರ್ಯಾದೆಗೇಡು ಹತ್ಯೆ’ ಎಂಬ ಕರಾಳ ಮುಖವನ್ನು ಅನಾವರಣಗೊಳಿಸಿತು.

ಬಸವಣ್ಣ, ಅಂಬೇಡ್ಕರ್, ಬುದ್ಧ ಮತ್ತು ಕುವೆಂಪು ಅವರಂತಹ ಮಹಾಪುರುಷರ ವಿಚಾರಧಾರೆಗಳನ್ನು ನಾಟಕವು ಪ್ರತಿಬಿಂಬಿಸಿತು.

ನಾಟಕ ಪ್ರದರ್ಶನಗೊಂಡ ನಂತರ ನೆರೆದಿದ್ದ ರಂಗಾಸಕ್ತರು ಹಾಗೂ ನಿರ್ದೇಶಕ ಶಶಿಧರ್ ಭಾರಿಘಾಟ್ ನಡುವೆ ಸಂವಾದ ನಡೆಯಿತು. ಪೆರಿಯಾರ್, ಅಂಬೇಡ್ಕರ್ ಸೇರಿದಂತೆ ಸಮ ಸಮಾಜ ನಿರ್ಮಾಣದ ಮಹನೀಯರ ಕುರಿತು ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು, ಒಂದಷ್ಟು ಮಾತು ಹಾಗೂ ಸಲಹೆ ನೀಡಿದರು. ಅದರಲ್ಲಿ ಬಹುಮುಖ್ಯವಾಗಿ ರೈತರ ಚಳವಳಿ, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಉಳಿಸಲು ಕೈಗೊಂಡಿರುವ ಪಾದಯಾತ್ರೆ ಬಗ್ಗೆಯೂ ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ದಂತ ವೈದ್ಯ ಡಾ.ಆದರ್ಶ್ ಎಚ್.ಹೊನ್ನಪ್ಪ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-1345938075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.