ಮಂಗಳೂರು: ಇಲ್ಲಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ಭಾನುವಾರ (ಏ.5) ಸಂಜೆ 6.30ಕ್ಕೆ ಗೋವಾದ ವಿಶಿಷ್ಟ ಕಲೆ ಜಮ್ನಿವೆಲೊ ಖೆಳ್ ಪ್ರದರ್ಶನ ನಡೆಯಲಿದೆ.

ಸಂಸ್ಥೆಯ ತಿಂಗಳ ವೇದಿಕೆ ಸರಣಿಯ 292ನೇ ಕಾರ್ಯಕ್ರಮವಾಗಿ, ಆಂಟನಿ ದೆ ಮೈನಾ ಮತ್ತವರ ತಂಡ ಜಮ್ನಿವೆಲೊ ಖೆಳ್ ಪ್ರಸ್ತುತಪಡಿಸಲಿದೆ. ಗೋವಾದ ತಿಯಾತ್ರ್ ಅಕಾಡೆಮಿಯು ತಂಡವನ್ನು ಪ್ರಾಯೋಜಿಸಿದ್ದು, ಅಕಾಡೆಮಿಯ ಅಧ್ಯಕ್ಷ ಆಂಟನಿ ಬರ್ಬೊಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ರಂಗ ಮತ್ತು ಸಂಗೀತ ಪರಂಪರೆ, ವಿದೇಶಿ ಒಪೆರಾ ಹಾಗೂ ಪೋರ್ಚುಗೀಸ್ ಶೈಲಿಯ ಮಿಶ್ರಣದ ವಿಶಿಷ್ಟ ರಂಗ ಪ್ರಯೋಗವೇ ತಿಯಾತ್ರ್. ಗೋವಾದ ಸಾಂಪ್ರದಾಯಿಕ ರಂಗಭೂಮಿಯಾದ ಖೆಳ್ ತಿಯಾತ್ರ್ ಅಥವಾ ಜಮ್ನಿವೆಲೊ ಖೆಳ್ ವೇದಿಕೆಯ ಅಗತ್ಯವಿಲ್ಲದೆ, ಕನಿಷ್ಟ ರಂಗ ಸಜ್ಜಿಕೆಯಿಂದ, ಮಿತ ಸ್ಥಳಾವಕಾಶದಲ್ಲಿ ಜನರಲ್ಲಿ ರಂಗಪ್ರೇಮ ಬೆಳೆಸುತ್ತಾ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-29-23853328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.