ಮಂಗಳೂರು: ಇಂದಿನ ಸಮಾಜದಲ್ಲಿ ಕಲಾವಿದರಿಗೆ ಹಾಗೂ ಕಲೆಗೆ ಮಾನ್ಯತೆ ಸಿಗುತ್ತಿದೆ. ಕಲಾವಿದರ ಕೆಲಸಕ್ಕೂ ಮಾನ್ಯತೆ ಸಿಗುತ್ತಿದ್ದು, ಅವರ ಗೌರವವೂ ಹೆಚ್ಚಾಗಿದೆ ಎಂದು ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ಅಭಿಪ್ರಾಯಪಟ್ಟರು.

‘ಕಲಾಭಿ’ ಸಂಸ್ಥೆ ಮಕ್ಕಳಿಗಾಗಿ ಹಮ್ಮಿ ಕೊಂಡಿದ್ದ ನಾಲ್ಕನೇ ವರ್ಷದ 'ಅರಳು 2026’ ವೃತ್ತಿಪರ ರಂಗಭೂಮಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಆರತಿ ಶೆಟ್ಟಿ, ‘ಮಕ್ಕಳು ಇಂತಹ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು. ಪೋಷಕರು ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.

ಉದ್ಯಮಿ ಅಶ್ವಿನಿ ಕಾಮತ್, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹಾಗೂ ಶಿಬಿರದ ನಿರ್ದೇಶಕ ಚರಿತ್ ಸುವರ್ಣ ಅತಿಥಿಗಳಾಗಿದ್ದರು.

ಕಲಾಭಿಯ ಕಾರ್ಯದರ್ಶಿ ಉಜ್ವಲ್ ಯು.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಭಿ ಅಧ್ಯಕ್ಷ ಸುರೇಶ್ ವರ್ಕಾಡಿ ಧನ್ಯವಾದ ಸಮರ್ಪಿಸಿದರು. ಕಲಾಭಿ ಥಿಯೇಟರ್ ಮತ್ತು ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ನ ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-29-1867522346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.