ಮೈಸೂರು: ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿಸಿರುವ, ಮರಾಠಿ ನಾಟಕಕಾರ ಮಹೇಶ್ ಎಲಂಕುಂಚವಾರ್ ಅವರ ‘ಪಾರ್ಟಿ’ ನಾಟಕ ಕೃತಿ ಬಿಡುಗಡೆಯು ನಗರದ ರಂಗಾಯಣದ ‘ವನರಂಗ’ದಲ್ಲಿ ಮಾರ್ಚ್ 28ರಂದು ಸಂಜೆ 5ಕ್ಕೆ ನಡೆಯಲಿದೆ.

ನಿರಂತರ ಫೌಂಡೇಷನ್ ಮತ್ತು ಅಭಿರುಚಿ ಪ್ರಕಾಶನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕರಾದ ಜಯಂತ ಕಾಯ್ಕಿಣಿ, ಡಿ.ಎಸ್.ಚೌಗಲೆ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಅಭಿರುಚಿ ಗಣೇಶ್ ಪಾಲ್ಗೊಳ್ಳುವರು.

‘ಸಮಾಜದ ಉನ್ನತ ವರ್ಗ ಎಂದುಕೊಂಡಿರುವ ಮನುಷ್ಯನ ಮುಖವಾಡಗಳನ್ನು ಕಳಚುವ ನಾಟಕವಾಗಿದ್ದು, 1974ರಲ್ಲಿ ಪ್ರಕಟವಾಗಿ, 50 ವರ್ಷಗಳ ಸಂಭ್ರಮವನ್ನು ಆಚರಿಸಿದೆ. ಒಂದುರಾತ್ರಿಯಲ್ಲಿ ನಡೆಯುವ ಕಥಾ ಹಂದರವನ್ನು ನಾಟಕ ಹೊಂದಿದ್ದು, ಮಾನವ ಸಂಬಂಧಗಳು ಹಾಗೂ ಕಲಾ ಜಗತ್ತಿನ ರಾಜಕೀಯ ಹೇಳುತ್ತದೆ’ ಎಂದು ಪ್ರಸಾದ್ ಕುಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3ರಿಂದ ಪಾರ್ಟಿ ಪ್ರದರ್ಶನ: ನಿರಂತರ ರಂಗ ತಂಡದ ಕಲಾವಿದರು ಅಭಿನಯಿಸಿರುವ ‘ಪಾರ್ಟಿ’ ನಾಟಕವು ಏಪ್ರಿಲ್ 3, 4 ಮತ್ತು 5ರಂದು ಕಿರು ರಂಗಮಂದಿರದಲ್ಲಿ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ. ನಾಟಕದ ನಿರ್ದೇಶನವನ್ನು ಚಿದಂಬರರಾವ್ ಜಂಬೆ ಮಾಡಿದ್ದಾರೆ. ಬೆಳಕು– ಜೀವನ್ ಕುಮಾರ್ ಬಿ.ಹೆಗ್ಗೋಡು, ರಂಗ ವಿನ್ಯಾಸ– ಮಧು, ವಸ್ತ್ರ ವಿನ್ಯಾಸ– ಮೆರಿನಾ ಪ್ರಸಾದ್, ಸಂಗೀತ– ಬಿ.ಕೆ.ಕಿರಣ್ ಅವರದ್ದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-39-1782283796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.