ಮೈಸೂರು: ನಗರದ ಕಿರುರಂಗಮಂದಿರದಲ್ಲಿ ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿಸಿರುವ ಮಹೇಶ್ ಎಲಕುಂಚವಾರ್ ಅವರ ‘ಪಾರ್ಟಿ’ ನಾಟಕ ಪ್ರದರ್ಶನಕ್ಕೆ ಶುಕ್ರವಾರ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಚಾಲನೆ ನೀಡಿದರು.

ನಂತರ ಮಾತನಾಡಿ, ‘ನಾಟಕಗಳು ಜನರೊಂದಿಗೆ ಸಂವಾದವನ್ನು ನಡೆಸಬೇಕು. ಅದಕ್ಕಾಗಿ ಸಮಾನತೆ, ಜನಪರ ಚಿಂತನೆ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆಯ ರಂಗ ತಂಡಗಳು ಅಗತ್ಯವಾಗಿ ಬೇಕಿವೆ. ನಿರಂತರ ರಂಗ ತಂಡವು ರಂಗಸಂವಾದವನ್ನು ಬದ್ಧತೆಯಿಂದ ನಡೆಸುತ್ತಿದೆ’ ಎಂದರು.

‘ಕನ್ನಡ ರಂಗಭೂಮಿಗೆ ನಾಟಕದ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರ ಕೊಡುಗೆ ಅಪಾರ. ವಾಸ್ತವವಾದಿ ನಾಟಕ ಶೈಲಿಯಲ್ಲಿ ವಿಶೇಷ ಪ್ರಾವಿಣ್ಯ ಹೊಂದಿದ್ದು, ಪಠ್ಯ ಮತ್ತು ಪ್ರದರ್ಶನದ ನಡುವಿನ ಸೂಕ್ಷ್ಮತೆಯನ್ನು ನಿಖರವಾಗಿ ಹಿಡಿದಿಡುತ್ತಾರೆ. ಪಾತ್ರಗಳ ಮನೋವೈಜ್ಞಾನಿಕ ಆಳ ಮತ್ತು ದೃಶ್ಯ ವಿನ್ಯಾಸದಲ್ಲಿ ಅಳವಡಿಸುವ ವಿಶೇಷ ನೈಪುಣ್ಯ ಅವರ ನಿರ್ದೇಶನದ ಬಲವಾಗಿದೆ’ ಎಂದು ಅಭಿಪ್ರಾಯಪಟ್ಟರು.

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರೊ.ಕಾಳಚೆನ್ನೇಗೌಡ, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಚಿನ್ನಸ್ವಾಮಿ ಒಡ್ಡಗೆರೆ, ರಂಗಕರ್ಮಿಗಳಾದ ರಾಮೇಶ್ವರಿವರ್ಮ, ರತ್ನ ಮಿರ್ಲೆ, ನಿರಂತರದ ಪ್ರಸಾದ್ ಕುಂದೂರ್, ಎಂ.ಎಂ.ಸುಗುಣ, ಶ್ರೀನಿವಾಸ್, ರೇಖಾ, ರಾಘವೇಂದ್ರ ರೆಡ್ಡಿ ಬಳ್ಳಾರಿ ಪಾಲ್ಗೊಂಡಿದ್ದರು.

ನಾಟಕವು ಏ.5ರವರೆಗೆ ಕಿರುರಂಗಮಂದಿರದಲ್ಲಿ ನಿತ್ಯ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-39-1838117351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.