ಮೈಸೂರು: ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ವತಿಯಿಂದ ಮಾರ್ಚ್ 29ರಿಂದ 31ರವರೆಗೆ ನಗರದ ಕಿರು ರಂಗಮಂದಿರದಲ್ಲಿ ನಾಡೋಜ ಬೆಳಗಲ್ಲು ವೀರಣ್ಣನವರ 98ನೇ ಹಾಗೂ ಬಿ. ಪುಟ್ಟಸ್ವಾಮಿ ಅವರ 130ನೇ ಸವಿನೆನಪಿನ ‘ಪೌರಾಣಿಕ ರಂಗ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ರಂಗ ತಂಡದ ಮುಖ್ಯಸ್ಥ ಬಿ.ಎಂ. ರಾಮಚಂದ್ರ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಯಕ್ರಮವನ್ನು 29ರಂದು ಸಂಜೆ 5.30ಕ್ಕೆ ಹಿರಿಯ ರಂಗಕರ್ಮಿ ಕಲ್ಪನಾ ನಾಗನಾಥ್ ಉದ್ಘಾಟಿಸುವರು. ಎಂ.ಡಿ. ಸುದರ್ಶನ್ ಭಾಗವಹಿಸುವರು. ಉಡಿಗಾಲ ಮಹದೇವಪ್ಪ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು. ಬಳಿಕ ರಂಗ ಗೀತಾಂಜಲಿ ತಂಡದಿಂದ ರಂಗ ಗೀತೆ ಗಾಯನವಿದೆ. ಸಂಜೆ 6.45ಕ್ಕೆ ಬಿ. ಪುಟ್ಟಸ್ವಾಮಿ ಅವರ ರಚನೆಯ ಗದಾಯುದ್ಧ ನಾಟಕ ಪ್ರದರ್ಶನವಿದೆ’ ಎಂದರು.

30ರಂದು ಸಂಜೆ 5.30ರಿಂದ 6.30 ರವರೆಗೆ ರಂಗಗೀತೆ ಗಾಯನ ನಡೆಯಲಿದೆ. ನಿರ್ಮಲಾ ಮಠಪತಿ, ಬಿ.ಆರ್. ರವೀಶ್, ಎಸ್.ಎನ್. ಶ್ರೀನಿವಾಸ್ ಉಪಸ್ಥಿತರಿರುವರು. ಕೆ. ರಾಮಮೂರ್ತಿರಾವ್ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು. ಸಂಜೆ 6.30ಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ ರಚನೆಯ ‘ಮಂಥರಾ’ ನಾಟಕ ಪ್ರದರ್ಶನವಿದೆ. 31ರಂದು ಸಂಜೆ 5.30ರಿಂದ 6.30ರವರೆಗೆ ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡ ರಂಗಗೀತೆ ಪ್ರಸ್ತುತ ಪಡಿಸಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸಮಾರೋಪ ನುಡಿ ಆಡಲಿದ್ದಾರೆ. ಪುಟ್ಟಣ್ಣಯ್ಯ ಉಪಸ್ಥಿತರಿರುವರು. ಮೈಮ್ ರಮೇಶ್ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು. ಸಂಜೆ 6.45ಕ್ಕೆ ಕಂದಗಲ್ಲ ಹನುಮಂತರಾಯರ ರಚನೆಯ ರಕ್ತರಾತ್ರಿ ನಾಟಕ ಪ್ರದರ್ಶನವಿದೆ ಎಂದು ಮಾಹಿತಿ ನೀಡಿದರು.

ಸಂಘಟಕರಾದ ಧನಲಕ್ಷ್ಮಿ, ಯಶೋದಾ, ರಾಜು, ಭುವನೇಶ್ವರಿ, ದಿನೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-39-1369985945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.