ಮೈಸೂರು: ಇಲ್ಲಿನ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಗುರುವಾರ ರಾಷ್ಟ್ರಕೂಟರ ಕಾಲವನ್ನು ನಾಟಕಕಾರ ಹೊರೆಯಾಲ ದೊರೆಸ್ವಾಮಿ ಪ್ರೇಕ್ಷಕರ ಕಣ್ಣ ಮುಂದೆ ತಂದರು. ಅಲ್ಲಿ ರಂಗ ನಟರು ಇರಲಿಲ್ಲ, ಆದರೆ, ತಮ್ಮ ನೂತನ ನಾಟಕ ‘ದೊರೆ ದಡಿಯಪ್ಪ’ ಅನ್ನು ಕಂಚಿನ ಕಂಠದಲ್ಲಿ ವಾಚಿಸಿ ಗಮನ ಸೆಳೆದರು.

ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐತಿಹಾಸಿಕ ನಾಟಕದ ಹಿನ್ನೆಲೆಯನ್ನು ಹೇಳಿದ ಅವರು, 1984ರಲ್ಲಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದ ಮುಂಭಾಗದ ಉದ್ಯಾನದಲ್ಲಿ ಮಾಡಿದ ಮೊದಲ ನಾಟಕ ವಾಚನವನ್ನು ನೆನಪು ಮಾಡಿಕೊಂಡರು. ಪ್ರೊ.ರಾಮದಾಸ್, ವಿಜಯಾ ದಬ್ಬೆ, ಅನಂತರಂಗಾಚಾರ್, ಶಿವರಾಮ ಕಾಡನಕುಪ್ಪೆ ಮೊದಲಾದವರನ್ನು ಸ್ಮರಿಸಿದರು.

‘ದೊರೆ ದಡಿಯಪ್ಪ ಐತಿಹಾಸಿಕ, ಕಾಲ್ಪನಿಕ ನಾಟಕವಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಮಾಂಡಲೀಕನಾಗಿದ್ದ ದಡಿಯಪ್ಪ ಎಂಬ ಪಾತ್ರವನ್ನು ತೆಗೆದುಕೊಂಡು, ಸಂಶೋಧನೆ ನಡೆಸಿ, ಸನ್ನಿವೇಶಗಳನ್ನು ಅವಲೋಕಿಸಿ, 16 ದೃಶ್ಯಗಳಲ್ಲಿ ಅನಾವರಣಗೊಳಿಸಲಾಗಿದೆ’ ಎಂದು ದೊರೆಸ್ವಾಮಿ ಹೇಳಿದರು.

‘ಚಾಲುಕ್ಯರ ಪುಲಿಕೇಶಿ, ರಾಷ್ಟ್ರಕೂಟರ ಅಮೋಘವರ್ಷ, ಗಂಗರ ದುರ್ವಿನೀತ, ಕದಂಬರ ಮಯೂರವರ್ಮ, ಸೇವುಣರ ಸಿಂಘಣ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಎಲ್ಲ ರಾಜಮನೆತನಗಳ ಪ್ರಮುಖರನ್ನು ನೆನಪು ಮಾಡಿಕೊಳ್ಳುತ್ತೇವೆ. ಆದರೆ, ಎಲ್ಲ ರಾಜ ಮನೆತನಗಳ ಮೊದಲ ದೊರೆ ಆದ ಬಗೆ ಹೇಗೆ ಎಂಬ ಬಗ್ಗೆ ನನಗೆ ಎಂದಿಗೂ ಕುತೂಹಲವಿತ್ತು. ಹೀಗಾಗಿ, ಮಾಂಡಲೀಕರು ರಾಜರಾಗುವ ಹೋರಾಟದ ಕಥನವೇ ರೋಚಕವಾಗಿರುತ್ತದೆ. ಕದಂಬರ ಮಯೂರ ಶರ್ಮ, ವರ್ಮನಾದ ಬಗ್ಗೆ ಎಷ್ಟೊಂದು ಕಥಾನಕಗಳಿವೆ’ ಎಂದು ಉದಾಹರಿಸಿದರು.

‘ದೊರೆ ದಡಿಯಪ್ಪ ನಾಟಕದ ಪಾತ್ರಗಳ ಹೆಸರನ್ನು ಕರುನಾಡಿನ ಶಾಸನಗಳಿಂದ ಆಯ್ದುಕೊಳ್ಳಲಾಗಿದೆ. ಸೂತ್ರಧಾರ, ನಾಗವ್ವೆ, ಬಡಿಗ, ಗೌಡಿಕೆಯವರು, ಅಯ್ಯನವರು, ಮೆಣಸ, ಹಲಸಯ್ಯ, ಕೆಂಡಗಣ್ಣ, ಬಿಲ್ಲಯ್ಯ, ಕುಳವಾಡಿ ಮಿಣ್ಣಯ್ಯ, ಕುಂಬ, ಗೊಟ್ಟ ಹೀಗೆ 8ನೇ ಶತಮಾನದ ಶಾಸನಗಳ ಹೆಸರುಗಳಿವೆ. ಜಾನಪದ ಗೀತೆಯ ಲಯದಲ್ಲಿ ರಚಿಸಿರುವೆ’ ಎಂದು ವಿವರಿಸಿದರು.

ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ, ರಂಗಕರ್ಮಿ ಕೆ.ಜೆ.ನಾರಾಯಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-39-1461397123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.