ಮೈಸೂರು: ‘ನಾಟಕ ಮನರಂಜನೆಯ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಮಾಧ್ಯಮ’ ಎಂದು ಆಹಾರ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್ ಪ್ರತಿಪಾದಿಸಿದರು.

ರಂಗಾಯಣದ ವನರಂಗದಲ್ಲಿ ಮಂಗಳವಾರ ‘ಚಿಣ್ಣರ ಮೇಳ’ದ ಮಕ್ಕಳ ನಾಟಕೋತ್ಸವ ಉದ್ಘಾಟಿಸಿ ಮತ್ತು ರಂಗ ಗೌರವ ಸ್ವೀಕರಿಸಿ ಮಾತನಾಡಿದರು.

‘ಕಾವ್ಯಕ್ಕಿಂತಲೂ ನಾಟಕ ರಮ್ಯವಾದದ್ದು, ನಟರಿಗೆ ಪರಕಾಯ ಪ್ರವೇಶ ಪಡೆಯುವ ಅವಕಾಶದೊಂದಿಗೆ ದಿವ್ಯಾನುಭೂತಿ ನೀಡುತ್ತದೆ. ಬೀದಿ ನಾಟಕದಲ್ಲಿಯಂತೂ ಸಮಾಜದ ಸಮಸ್ಯೆಗಳನ್ನು ಅಧಿಕಾರಸ್ಥರಿಗೆ ತಿಳಿಸಬಹುದು, ಅದು ಪ್ರತಿಭಟನೆಯ ಅಭಿವ್ಯಕ್ತಿಯಾಗಿದೆ. ಜನರಲ್ಲಿ ಜಾಗೃತಿಯನ್ನೂ ಮೂಡಿಸಬಹುದು’ ಎಂದು ವಿವರಿಸಿದರು.

‘ನಾಟಕದ ಭಾವ ಪ್ರಜ್ಞೆ ಇದ್ದರೆ ಜನರ ಕಷ್ಟ, ರೈತರ ಶ್ರಮ ಗೊತ್ತಾಗುತ್ತದೆ. ನಾನು ಚಿಕ್ಕವಳಿದ್ದಾಗ ನನ್ನ ತಾಯಿಯವರು ತಟ್ಟೆಯಲ್ಲಿ ಅನ್ನ ಬಿಟ್ಟರೆ ಅದು ಅಳುತ್ತದೆಂದು ಹೇಳುತ್ತಿದ್ದರು. ರೈತರು, ಕಾರ್ಮಿಕರ ಬೆವರಿನ ಬೆಲೆಯನ್ನು ವಿವರಿಸುತ್ತಿದ್ದರು. ಅಂತ ಪ್ರಜ್ಞೆಯನ್ನು ಪೋಷಕರು ಮಕ್ಕಳಲ್ಲಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಪೋಷಕರು ಎಂದಾದರೂ ತಮ್ಮ ಸುತ್ತಲಿನ ಪರಿಸರವನ್ನು ಪರಿಚಯಿಸಿದ್ದಾರೆಯೇ? ಪರಿಸರ, ಮಣ್ಣಿನ ಮಹತ್ವ, ವಿಜ್ಞಾನ, ಖಗೋಳವನ್ನು ಮಕ್ಕಳಿಗೆ ಹೇಳಿಕೊಡಬೇಕು. ಕಾಲದ ಒತ್ತಡಕ್ಕೆ ಸಿಲುಕಿರುವ ಪೋಷಕರು ಮಕ್ಕಳನ್ನು ಬೆಳೆಸಬಾರದು. ಬೆಳೆಯಲು ಬಿಡಬೇಕು. ತಮ್ಮ ಕನಸುಗಳನ್ನು ಅವರಲ್ಲಿ ಹೇರಬಾರದು’ ಎಂದು ಹೇಳಿದರು.

ನಂತರ ಚಿಣ್ಣರು ‘ಮಣ್ಣಿನ ಮನೆ’ ಹಾಗೂ ‘ಕೃಷ್ಣ ಜಾಂಬವತಿ ಕಲ್ಯಾಣ’ ನಾಟಕಗಳನ್ನು ಪ್ರದರ್ಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಉಪ ನಿರ್ದೇಶಕ ಎಂ.ಡಿ.ಸುದರ್ಶನ್, ರಂಗ ಸಮಾಜದ ಸದಸ್ಯರಾದ ಸುರೇಶ್ ಬಾಬು, ಡಿಂಗ್ರಿ ನರೇಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಜಾಹಿದಾ, ಶಿಬಿರದ ಸಂಚಾಲಕ ಸಂತೋಷ್ ದಿಂಡಗೂರು, ಶಿಕ್ಷಕ ಯತೀಶ್ ಎನ್.ಕೊಳ್ಳೇಗಾಲ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-39-386839755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.