ಮೈಸೂರು: ‘ಪೌರಾಣಿಕ ನಾಟಕ ಕಂಪನಿಗಳು ಒಂದು ಅಕಾಡೆಮಿಗೆ ಸಮನಾಗಿ ಕೆಲಸ ಮಾಡಿವೆ. ರಂಗಭೂಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೂ ಅಪಾರ’ ಎಂದು ರಂಗಕರ್ಮಿ ಕಲ್ಪನಾ ನಾಗನಾಥ್ ಹೇಳಿದರು.

ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದಿಂದ ಬೆಳಗಲ್ಲು ವೀರಣ್ಣ ಅವರ 98ನೇ ಹಾಗೂ ಬಿ.ಪುಟ್ಟಸ್ವಾಮಯ್ಯ 130ನೇ ಸವಿನೆನಪಿನಲ್ಲಿ ಇಲ್ಲಿನ ಕಿರುರಂಗಮಂದಿರದಲ್ಲಿ ಆಯೋಜಿಸಿರುವ 3 ದಿನಗಳ ಪೌರಾಣಿಕ ‘ರಂಗ ಸಂಭ್ರಮ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ಹವ್ಯಾಸಿ ಮತ್ತು ಕಂಪನಿ ನಾಟಕ ತಂಡಗಳ ಅಭಿವ್ಯಕ್ತಿ ಭಿನ್ನವಾಗಿದ್ದರೂ ಅವು ರಂಗಭೂಮಿ ಕ್ಷೇತ್ರಕ್ಕೆ ಸಮಾನ ಕೊಡುಗೆ ನೀಡಿವೆ. ಕಲಾರಾಧನೆಯಲ್ಲಿ ಯಾವುದೇ ಭಿನ್ನತೆಯಿಲ್ಲ’ ಎಂದರು.

ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಅವರ ಹಾರ್ಮೋನಿಯಂ ನೇತೃತ್ವದಲ್ಲಿ ಸುಪ್ರೀತ್ ಎಸ್. ಭಾರದ್ವಾಜ್ ತಂಡವು ಪ್ರಸ್ತುತಪಡಿಸಿದ ರಂಗಗೀತೆಗಳು ನೆರೆದವರ ಮನ ಸೆಳೆದವು. ರಾಮಾಯಣ, ಮಹಾಭಾರತದ ಕೆಲ ಪದ್ಯಗಳು, ಸುಭದ್ರೆಯ ಮಮತೆಯ ಕಥನ, ಮೋಹನ ಸಂಗೀತ ಎಂಬ ಹಾಡುಗಳು ಮೆಚ್ಚುಗೆ ಗಳಿಸಿದವು.

ಗಾಯಕರಾದ ಸುಪ್ರೀತ್, ನಿಸರ್ಗ, ವಿಸ್ಮಯ, ನೀತು ಅವರು ತಮ್ಮ ಗಾಯನ ವೇಳೆಯಲ್ಲಿ ವೇದಿಕೆಯನ್ನು ಆವರಿಸಿ ಸೈ ಎನಿಸಿಕೊಂಡರು. ಕ್ಲಾರಿಯೋನೆಟ್ನಲ್ಲಿ ಪ್ರಕಾಶ್, ತಬಲಾ ವಾದನದಲ್ಲಿ ಕೃಷ್ಣ ಚೈತನ್ಯ ಸಹಕಾರ ನೀಡಿದರು.

ನಾಟಕ ಪ್ರದರ್ಶನ: ಕಾರಸವಾಡಿ ಸುರೇಶ್ ನಿರ್ದೇಶನದಲ್ಲಿ ಬಿ.ಪುಟ್ಟಸ್ವಾಮಯ್ಯ ರಚನೆಯ ‘ಗದಾಯುದ್ಧ’ ನಾಟಕವನ್ನು ಮಂಡ್ಯದ ಮಾಂಡವ್ಯ ರಂಗಕಲಾ ಟ್ರಸ್ಟ್ ಸದಸ್ಯರು ಪ್ರಸ್ತುತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್, ವಿದ್ವಾನ್ ಕಿರಗಸೂರು ರಾಜಪ್ಪ, ಲಕ್ಷ್ಮಿ, ರಂಗತಂಡದ ಬಿ.ಎಂ.ರಾಮಚಂದ್ರ, ಶ್ರೀನಿವಾಸ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-37-1649536846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.