ನರೇಗಲ್: ‘ಧುತ್ತರಗಿಯವರು ತಮ್ಮ ನಾಟಕಗಳ ಮೂಲಕ ರಾಷ್ಟೀಯ ಪ್ರೇಮ, ಭಾತೃತ್ವ, ಬಂಧುತ್ವ ಬಿತ್ತುವ ಕೆಲಸ ಮಾಡಿದರು’ ಎಂದು ಶಿಕ್ಷಕ ಆರ್.ಕೆ.ಬಾಗವಾನ ಹೇಳಿದರು.

ನರೇಗಲ್ ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಿ.ಬಿ.ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ ಸಹಯೋಗದಲ್ಲಿ ಗುರುವಾರ ನಡೆದ ಪಿ.ಬಿ.ಧುತ್ತರಗಿ ಅವರ ಸರ್ವಮಂಗಳ ನಾಟಕದ ಓದು-ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಮಾತನಾಡಿದರು.

‘ನಾಟಕಗಳ ರಚನೆ ಮೂಲಕ ರಂಗಭೂಮಿಗೆ ಹೊಸ ಹುರುಪನ್ನು ತಂದು, ಪ್ರಸ್ತುತ ಆಧುನಿಕ ಮಾಧ್ಯಮಕ್ಕೆ ಸವಾಲು ಒಡ್ಡುವಂತೆ ರಂಗಭೂಮಿ ಬೆಳೆಸಿದವರಲ್ಲಿ ಪಿ.ಬಿ ಧುತ್ತಗಿರಿ ಅವರು ಪ್ರಮುಖರು. ತಮ್ಮ ನಾಟಕದ ಮೂಲವಕೇ ಜನರಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದುವಂತೆ ಮಾಡಿದವರು. ಸಿನಿಮಾಕ್ಕೂ ಇವರ ನಾಟಕಕ್ಕೂ ಒಂದಕ್ಕೊಂದು ಸಂಬಂಧ ಇದ್ದು ಇದಕ್ಕೆ ‘ಸಂಪತ್ತಿಗೆ ಸವಾಲ್’ಒಂದು ಉತ್ತಮ ಉದಾಹರಣೆಯಾಗಿದೆ’ ಎಂದರು.

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ‘ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತರುವ ಮೂಲಕ ಪಿ.ಬಿ.ಧುತ್ತರಗಿಯವರು ಕನ್ನಡ ನಾಟಕ ಕ್ಷೇತ್ರದಲ್ಲಿ ಹೊಸ ಅಲೆ ಹುಟ್ಟು ಹಾಕಿದರು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿಯೇ ಸಾಮಾಜಿಕ ವ್ಯವಸ್ಥೆ ಪ್ರಶ್ನಿಸುವ, ಜಮೀನ್ದಾರಿ ಧೋರಣೆಗೆ ಸೆಡ್ಡು ಹೊಡೆಯುವ ನಾಟಕ ರಚಿಸಿ ಹೋರಾಟದ ಪ್ರಜ್ಞೆ ಮೂಡಿಸಿದರು’ ಎಂದರು.

‘ಇದೇ ಸಂದರ್ಭದಲ್ಲಿ ಪಿ.ಬಿ.ದುತ್ತರಗಿ ಅವರ ಹೆಸರಿನಲ್ಲಿ ಬಾಗಲಕೋಟೆಯಲ್ಲಿ ಒಂದು ಸುಸಜ್ಜಿತ ರಂಗ ಮಂದಿರ ನಿರ್ಮಾಣ ಮಾಡಬೇಕು, ಅವರ ಎಲ್ಲ ನಾಟಕಗಳು ಮರು ಮುದ್ರಣವಾಗಬೇಕು ಹಾಗೂ ಉತ್ತರ ಕರ್ನಾಟಕದ ಯಾವುದಾದರೊಂದು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಸದಸ್ಯ ಚಿದಾನಂದ ಧೂಪದ ಮಾತನಾಡಿ, ‘ಆಯಾ ಕಾಲಕ್ಕೆ ತಕ್ಕ ಹಾಗೆ ಜಲ್ವಂತ ಸಮಸ್ಯೆಗಳನ್ನು ಎತ್ತಿಕೊಂಡು ನಾಟಕ ಬರೆದ ಕೀರ್ತಿ ಧುತ್ತರಗಿಯವರದ್ದಾಗಿದೆ. ಇವರು ಓದಿದ್ದು 4ನೇ ತರಗತಿ, ಬರೆದ ನಾಟಕಗಳ ಸಂಖ್ಯೆ 56. ವಿಚಿತ್ರವೆಂದರೇ, ಚಲನಚಿತ್ರವಾದ ‘ಸಂಪತ್ತಿಗೆ ಸವಾಲ್’ ಸೇರಿದಂತೆ ಅನೇಕ ನಾಟಕಗಳನ್ನು ಬರೆದಿದ್ದ ಹಿರಿಯ ರಂಗಕರ್ಮಿ ಪಿ.ಬಿ.ಧುತ್ತರಗಿ ಅವರ ಬದುಕಿನ ಕೊನೆ ಕ್ಷಣಗಳೂ ನಾಟಕವೇ ಆಗಿ ಹೋಯಿತು’ ಎಂದರು.

ನಂತರ ಸರ್ವಮಂಗಳ ನಾಟಕದ ಸನ್ನವೇಶಗಳನ್ನು ಓದಿದ, ಅಭಿಪ್ರಾಯ ಹಂಚಿಕೊಂಡ ಹಾಗೂ ಸಂವಾದದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಸಂಸ್ಥೆಯ ಚೇರ್ಮನ್ ಎಸ್.ಎ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಡಿ.ಎಲ್.ಪವಾರ, ಬಸವರಾಜ ಪಲ್ಲೇದ, ಟ್ರಸ್ಟ್ ಸದಸ್ಯರಾದ ಸಿದ್ದಪ್ಪ ಮಾದರ, ಸುನಂದಾ ಕಂದಗಲ್ಲ, ಪುಂಡಲಿಕ, ಕಲ್ಲಯ್ಯ ಹಿರೇಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-23-1569382593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.