ನುಗ್ಗೇಹಳ್ಳಿ: ‘ಗ್ರಾಮೀಣ ಪ್ರದೇಶದ ಮೂಲ ಪರಂಪರೆಯಾದ ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಹೂವಿನಹಳ್ಳಿಯಲ್ಲಿ ಮಾರುತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ವೆಂಕಟೇಶ್ವರ ಸ್ವಾಮಿ ದೇವರ ಸಮ್ಮುಖದಲ್ಲಿ ರಾಜ ಸತ್ಯವ್ರತ ಅಥವಾ ಶನಿ ಪ್ರಭಾವ ನಾಟಕ ಪ್ರದರ್ಶನ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೂರ್ವಿಕರ ಕಾಲದಲ್ಲಿ ಜಾತ್ರೆ ಹಾಗೂ ಹಬ್ಬದ ಸಮಯದಲ್ಲಿ ನಾಟಕ ಕಲಿತು ಅಭಿನಯಿಸುತ್ತಿದ್ದರು. ಇದರಿಂದ ಅವರಲ್ಲಿರುವ ಕಲೆಯು ಹೊರ ಪ್ರಪಂಚಕ್ಕೆ ತಿಳಿಯುತ್ತಿತ್ತು. ಆದರೆ ವೈಜ್ಞಾನಿಕ ಯುಗದಲ್ಲಿ ಚಲನಚಿತ್ರಗಳೆ ಕಮ್ಮಿಯಾಗಿ ಯುವ ಸಮೂಹ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾ ಕಡೆ ಹೆಚ್ಚು ವಾಲುತ್ತಿದ್ದಾರೆ. ಇದರಿಂದ ಜನಪದ ಕಲೆಗಳು ನಶಿಸುವ ಹಂತದಲ್ಲಿವೆ. ಸಂಸ್ಕೃತಿ, ಧರ್ಮ ಉಳಿಸಿ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ’ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.

ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಮುಖಂಡರಾದ ಎಚ್.ಎಂ.ನಟರಾಜ್, ದೊರೆಸ್ವಾಮಿ, ಎಚ್.ಎಂ.ಗೋಪಾಲ್, ಎಚ್.ಸಿ.ನಾಗರಾಜ್, ದ್ರಾಕ್ಷಾಯಿಣಿ ಯಲ್ಲಪ್ಪ, ಮೂಡ್ಲಗಿರಿ ಗೌಡ, ಹುಲಿಕೆರೆ ಸಂಪತ್ ಕುಮಾರ್, ಬಸವರಾಜ್, ಎನ್ಎಸ್ ಮಂಜುನಾಥ್, ಯಲ್ಲಪ್ಪ, ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಅಧ್ಯಕ್ಷ ವೆಂಕಟಪ್ಪ, ಖಜಾಂಚಿ ಎಚ್.ಕೆ.ರಮೇಶ್, ಎಚ್.ಎಸ್.ನಾಗರಾಜ್, ಎಚ್.ಎಂ.ರಮೇಶ್, ಉದ್ಯಮಿ ಆರ್.ಕೃಷ್ಣ ಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-36-1605954053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.