ಪಾಂಡವಪುರ: ರಂಗಭೂಮಿಯಾಗಲಿ ಅಥವಾ ಚಲನಚಿತ್ರವಾಗಲಿ ನಿರ್ದೇಶಕನೇ ನಿಜವಾದ ನಾಯಕ ಎಂದು ಚಿತ್ರ ನಟಿ, ರಾಜ್ಯ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿ ಪುರಸ್ಕೃತ ವಿಜೇತೆ ಅಕ್ಷತಾ ಪಾಂಡವಪುರ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಪಾಂಡವಪುರ ಇವರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಇವತ್ತು ಅಭಿನಯದ ನಡುವೆ ಗ್ಲಾಮರ್ ಕೂಡ ಮುಖ್ಯವಾಗಿಬಿಟ್ಟಿದೆ. ಪಾತ್ರ ಯಾವುದೇ ಆಗಲಿ ಗಟ್ಟಿತನ ಮುಖ್ಯ. ರಂಗಭೂಮಿಯಿಂದ ಬಂದ ನಟ, ನಟಿಯರಲ್ಲಿ ನಟನೆಯ ಗಟ್ಟಿತನವಿದೆ. ನಟನೆಗೆ ಸಾಹಿತ್ಯ ಸಂಸ್ಕೃತಿ, ರಂಗಭೂಮಿ, ಚಿತ್ರರಂಗದ ಇತಿಹಾಸದ ಓದು ಗಂಭೀರತೆಯನ್ನು ತಂದುಕೊಡುತ್ತದೆ. ಸಾಹಿತ್ಯ ಮತ್ತು ರಂಗಭೂಮಿ ಒದಕ್ಕೊಂದು ಅವಿನಾಭಾವ ಸಂಬಂಧವಿದೆ. ಜನರು ನಮ್ಮ ನಟನೆಯನ್ನು ನೋಡಿ ಶಭಾಷ್ಗಿರಿ ಕೊಡುವುದೇ ನಿಜವಾದ ಪ್ರಶಸ್ತಿಯಾಗಿದೆ ಎಂದರು.

‘ಮೌಢ್ಯ, ಅಜ್ಞಾನ, ಅಂಧಕಾರಗಳು ಹೆಣ್ಣನ್ನು ಬಂಧಿಸಿಬಿಟ್ಟಿವೆ. ಎಲ್ಲ ಕಟ್ಟುಪಾಡುಗಳು, ಬಂಧನಗಳು ಹೆಣ್ಣಿನ ಮೇಲೆ ಯಾಕೆ ಏರಿಕೆಯಾಗಿವೆ? ಎಂಬುದನ್ನು ನಾವೆಲ್ಲರೂ ಗಂಭೀರವಾಗಿ ಚರ್ಚಿಸಬೇಕಿದೆ. ಹೆಣ್ಣು ರಂಗಭೂಮಿಯಲ್ಲೋ ಚಲಚಿತ್ರದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದರೆ, ಅವಳು ನಾಟಕದವಳು, ಫಿಲಂನವಳು ಎಂದು ಮೂಗುಮೂರಿಯುತ್ತಾರೆ. ಅದೇ ಗಂಡನ್ನು ಹೀರೋ ಎಂದು ಹೊಗಳಲಾಗುತ್ತದೆ’ ಎಂದು ಬೇಸರವ್ಯಕ್ತಪಡಿಸಿದರು.

ಪಾಂಡವಪುರದ ನೆಲ ನನ್ನನ್ನು ರಂಗಭೂಮಿ ಕಲಾವಿದೆಯಾಗಿ ಬೆಳೆಸಿದೆ. ಈ ನೆಲ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನಂತರವರನ್ನು ನೀಡಿದ ನೆಲ, ಹಾಗಾಗಿ ಈ ನೆಲದ ಮೇಲೆ ನನಗೆ ಅಭಿಮಾನ ಮತ್ತು ಗೌರವವಿದೆ. ನಾನೀಗ ನಟಿಯಾಗಿ ಒಂದಿಷ್ಟು ಹೆಸರು ಮಾಡಿದರೂ ನನಗೆ ರಂಗಭೂಮಿಯಲ್ಲಿರುವ ಪ್ರೀತಿ, ಗೌರವ, ಆಸಕ್ತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ನಟನೆಯ ತಾಯಿ ಬೇರು ರಂಗಭೂಮಿಯಾಗಿದೆ ಎಂದರು.

ನಟಿ ಅಕ್ಷತಾ ಅವರಿಗೆ ಮೈಸೂರು ಪೇಟ ತೊಡಿಸಿ ಹೂಹಾರ ಹಾಕಿ ಸನ್ಮಾನಿಸಲಾಯಿತು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಮೇನಾಗರ, ಚಲನಚಿತ್ರ ನಿರ್ದೇಶಕಿ ಚಂಪಕ ಶೆಟ್ಟಿ, ನಟರಾದ ಪ್ರಕಾಶ್ ಪಿ.ಶೆಟ್ಟಿ, ಮಂಜು ನಟನ ಇದ್ದರು.

ಫಿಲಂಫೇರ್ ಪ್ರಶಸ್ತಿ ವಿಜೇತ ಚಲನಚಿತ್ರ ‘ಕೋಳಿ ಎಸ್ರು’ ಪ್ರದರ್ಶನಗೊಂಡಿತು. ಬಳಿಕ ಚಿತ್ರದ ಬಗ್ಗೆ ಸಂವಾದ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-40-1918101813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.