ಚುಟುಕು ಸಾಹಿತಿ ಎಚ್.ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಆಗಸ್ಟ್ 31ರಂದು ಶನಿವಾರ ಬಸವನಗುಡಿಯ ಎನ್.ಆರ್.ಕಾಲೊನಿಯಲ್ಲಿರುವ ಸಿ.ಅಶ್ವತ್ಥ್ ಕಲಾಭವನದಲ್ಲಿ 87ನೇ ಪ್ರದರ್ಶನ ಕಾಣುತ್ತಿದೆ.
ಡುಂಡಿರಾಜರ ಹಾಸ್ಯಪ್ರಜ್ಞೆಯ ಎರಕದಲ್ಲಿ ಮೂಡಿಬಂದಿರುವ ‘ಪುಕ್ಕಟೆ ಸಲಹೆ’ ನಾಟಕವು ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.ಕೈಯಲ್ಲಿ ಲ್ಯಾಪ್‌ಟ್ಯಾಪ್ ಹಿಡಿದು ರಂಗದ ಮೇಲೆ ಬಂದು ಕೂರುವ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ರಾಜ್ಯದ ವಿವಿಧ ಊರುಗಳಿಂದ ತಮ್ಮ ಚಿತ್ರ ವಿಚಿತ್ರ ಸಮಸ್ಯೆಗಳಿಗೆ ಪರಿಹಾರ ಕೇಳಲು ಕರೆ ಮಾಡುವ ಜನರಿಗೆ ಕೊಡುವ ಉಚಿತ ಸಲಹೆಗಳು ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತವೆ. ಅಶೋಕ್ ಬಿ ಅವರ ನಿರ್ದೇಶನ ಇರಲಿದೆ.
ಸಂಜೆ 7 ಗಂಟೆಗೆ