ರಾಮನಗರ: ಕನಕಪುರ ತಾಲ್ಲೂಕಿನ ಅಣಕಡಬೂರು ಗುಡ್ಡಯ್ಯ ಹೇಳಿದ ಕತೆಯನ್ನು ಆಧಾರವಾಗಿಟ್ಟುಕೊಂಡು ರಂಗಕ್ಕೆ ತರಲಾದ ‘ಬುಡಬೆಳ್ಳಿ-ನಡುಪಚ್ಚೆ-ಗೊನೆಮುತ್ತು’ ನಾಟಕವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಈಚೆಗೆ ಪ್ರದರ್ಶಿಸಲಾಯಿತು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಇಫ್ರೋ ಜಾನಪದ ಮಹಾವಿದ್ಯಾಲಯದ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿನಿಯರು ಅಭಿನಯದಲ್ಲಿ ಮೂಡಿಬಂದ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.

ನಾಟಕಕಾರ ಡಾ. ಎಂ. ಬೈರೇಗೌಡ ಮಾತನಾಡಿ, ಇರುಳಿಗರ ಜಾನಪದ ಅಧ್ಯಯನದ ಸಂದರ್ಭದಲ್ಲಿ ಕನಕಪುರ ತಾಲ್ಲೂಕಿನ ಅಣಕಡಬೂರು ಗುಡ್ಡಯ್ಯ ಹೇಳಿದ ಕತೆಯನ್ನು ನಾಟಕವಾಗಿ ರೂಪಾಂತರಿಸಲಾಗಿದೆ. ಸರ್ಟಿಫಿಕೇಟ್ ಕೋರ್ಸ್ನ 14 ವಿದ್ಯಾರ್ಥಿನಿಯರನ್ನು ಅಣಿಗೊಳಿಸಿ ನಾಟಕ ಪ್ರದರ್ಶಿಸಲಾಗುತ್ತಿದೆ. ಆ ಮೂಲಕ ಗ್ರಾಮೀಣ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗುತ್ತಿದೆ ಎಂದರು.

ವಿದ್ಯಾ ಬಿ., ನವ್ಯಶ್ರೀ, ಭವ್ಯ, ನಿಸರ್ಗ, ಬಿಂದು, ಸಿಂಚನ, ವೈಷ್ಣವಿ, ಪುಣ್ಯಶ್ರೀ, ಗಾನವಿ, ಸ್ಪೂರ್ತಿ, ಸುಪ್ರಿಯಾ, ಸಂಜನಾ, ತನಿಷ್ಕ ಹಾಗೂ ರಂಜಿನಿ ನಾಟಕದಲ್ಲಿ ಅಭಿನಯಿಸಿದ್ದರು.

ನಾಟಕಕ್ಕೆ ಗಜಾನನ ಟಿ. ನಾಯ್ಕ ಸಂಗೀತ ಸಂಯೋಜನೆ ಮಾಡಿದರು. ಹಿನ್ನೆಲೆ ಗಾಯಕರಾಗಿ ವಿದುಷಿ ವಿನುತಾ ಬೂದಿಹಾಲ್, ಶಶಿಕಲಾ ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರದರ್ಶನದ ಮೆರುಗು ಹೆಚ್ಚಿಸಿದರು. ಹರಿಪ್ರಸಾದ್ ವಾದ್ಯಗಳ ಸಹಕಾರ ನೀಡಿದರು. ಎಂ.ಸಿ. ನಾಗರಾಜ್ ಪ್ರಸಾದನ ಹಾಗೂ ಪುನೀತ್ ಕರ್ತ ಅವರು ಬೆಳಕಿನ ವಿನ್ಯಾಸ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-14-1948903543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.