ಶಿಗ್ಗಾವಿ: ಸಾಂಪ್ರದಾಯಿಕ ಸಂಕೋಲೆಗಳಿಂದ ಬಂಧಿತವಾಗಿದ್ದ ಸಮಾಜವನ್ನು ಅನುಭವ ಮಂಟಪದ ಮೂಲಕ ಸರಿದಾರಿಗೆ ತರಲು ಯತ್ನಿಸಿದ ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು ಸಾರಿದ ವಿಶ್ವಮಾನ್ಯ ಸಂದೇಶವನ್ನು ಬಸವ ಜಯಂತಿ ಅಂಗವಾಗಿ ಈಚೆಗೆ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಜರುಗಿದ ಜಗಜ್ಯೋತಿ ಬಸವೇಶ್ವರ ನಾಟಕ ಪ್ರಸ್ತುತಪಡಿಸಿತು.

ಬಸವಣ್ಣನವರ ಸರಳತೆ, ಮಾನವತಾವಾದ ಹಾಗೂ ಹೃದಯ ವೈಶಾಲ್ಯವನ್ನು ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ ಮತ್ತು ಕೊಂಡಿ ಮಂಚಣ್ಣನ ಕುಟಿಲತೆಯನ್ನು ಕಲಾವಿದ ರಾಘವೇಂದ್ರ ಕಬಾಡಿ, ಪಂಡಿತರ ಪಕ್ಷಪಾತವನ್ನು ಮುತ್ತುರಾಜ ಹಿರೇಮಠ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮನಸೆಳೆದರು. ಇನ್ನುಳಿದಂತೆ ಅಲ್ಲಮಪ್ರಭು ಹಾಗೂ ಈಶಾನ್ಯಮುನಿಯಾಗಿ ಮಂಜುನಾಥ ಕುಮ್ಮೂರು, ಬಿಜ್ಜಳನಾಗಿ ಬಸವರಾಜ ಹದ್ಲಿ, ಮಧುವರಸನಾಗಿ ಶಿವಲಿಂಗಯ್ಯಸ್ವಾಮಿ, ಹರಳಯ್ಯನಾಗಿ ಮಡಿವಾಳಪ್ಪ ಗಾಂಜಿ, ಪಂಡಿತನಾಗಿ ಚನ್ನಪ್ಪ, ಭದ್ರನಾಗಿ ಮದನಗೌಡ ಪುಟ್ಟನಗೌಡ್ರ, ಅಕ್ಕಮಹಾದೇವಿಯಾಗಿ ಪುಷ್ಪಮಾಲಾ ಅಣ್ಣಿಗೇರಿ, ಶರಣರಾಗಿ ಅರ್ವಮಂಗಳಮ್ಮು ಹಾಗೂ ಗೀತಾ ಶೃಂಗೇರಿ ತಮ್ಮ ಪಾತ್ರಗಳಿಗೆ ಜೀವಕಳೆ ನೀಡಿದರು.

ರವಿಕುಮಾರ ಹಾಗೂ ಚಂದ್ರಶೇಖರ ಹೊಸಮನಿ ವಾದ್ಯ ಸಹಕಾರ ನೀಡಿದರು. ಈ ನಾಟಕಕ್ಕೆ ಮಲ್ಲಿಕಾರ್ಜುನ ಜಾನಪದ ಕಲಾ ತಂಡ ಮುಗಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿತು.

ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವನ್ನು ಶಾಸಕ ಯಾಸೀರ್ ಅಹ್ಮದ್ಖಾನ ಪಠಾಣ ಉದ್ಘಾಟಿಸಿದರು. ವಿಶ್ವಗುರು ಬಸವಣ್ಣನವರ ಚಿತ್ರಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರುತಿ ಶಿಡ್ಲಾಪುರ ಪುಷ್ಪಾರ್ಪಣೆ ಮಾಡಿದರು. ಪಿಯುಸಿಯಲ್ಲಿ ಶೇ 80ಕ್ಕೂ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಂಚಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಬಸವಣ್ಣೆಪ್ಪ ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ರಾಮಗೇರಿ, ಮಾರುತಿ ಶಿಡ್ಲಾಪುರ, ಪ್ರಭು ಗುರಪ್ಪನವರ, ಪರಿಮಳಾ ಜೈನ್, ಶೈಲಜಾ ಪಾಟೀಲ, ಗುರಪ್ಪ ಹುಬ್ಬಳ್ಳಿ ಹಾಗೂ ಚಂದ್ರು ಬಡಿಗೇರ, ಗೂಳಪ್ಪ ಅರಳಿಕಟ್ಟಿ, ಬಸವರಾಜ ಗೊಬ್ಬಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-22-296286017

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.