ಶಿರಸಿ: ಇಲ್ಲಿನ ರಂಗಧಾಮದಲ್ಲಿ ಸಿದ್ದಾಪುರದ ಒಡ್ಡೋಲಗ ರಂಗ ಪರ್ಯಟನ ಹಿತ್ತಲಕೈ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಪ್ರಸ್ತುತಪಡಿಸಿದ ನಿಸರ್ಗಪ್ರಿಯ ವಿರಚಿತ ಶುನಶ್ಯೇಪ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು.

ಕೃತಯುಗದ ಹರಿಶ್ಚಂದ್ರನ ಕಾಲದ ಕಥಾವಸ್ತುವನ್ನು ಹೊಂದಿದ್ದ ಈ ನಾಟಕವು ಇಂದಿನ ಸಮಕಾಲೀನ ಸಮಸ್ಯೆಗಳನ್ನು ಪ್ರತಿಬಿಂಬಿಸುವಂತಿತ್ತು. ಪುತ್ರನನ್ನು ವರುಣನಿಗೆ ಸಮರ್ಪಿಸುವ ಮಾತನ್ನು ತಪ್ಪಿದ ಹರಿಶ್ಚಂದ್ರ ರಾಜನು ಎದುರಿಸುವ ಜಲೋಧರ ರೋಗ ಮತ್ತು ಕ್ಷಾಮದ ಸಂಕಷ್ಟಗಳು, ಅದರಿಂದ ಪಾರಾಗುವ ಹಾದಿಯೇ ನಾಟಕದ ತಿರುಳು. ಸತ್ಯದ ಶೋಧನೆ, ಪ್ರಭುತ್ವದ ಅಹಂಕಾರ ಹಾಗೂ ಬಡತನ-ಹಸಿವು ಮನುಷ್ಯನನ್ನು ತಲುಪಿಸುವ ದಾರುಣ ಸ್ಥಿತಿಯ ಹೃದಯಸ್ಪರ್ಶಿ ಸನ್ನಿವೇಶಗಳು ನೋಡುಗರ ಮನ ಮುಟ್ಟಿದವು.

ಮಂಜುನಾಥ್ ಎಲ್.ಬಡಿಗೇರ ಅವರ ಚತುರ ನಿರ್ದೇಶನ ಹಾಗೂ ಭಾರ್ಗವ ಹೆಗಡೆ ಹೆಗ್ಗೋಡು ಅವರ ಸಂಗೀತ ಸಂಯೋಜನೆಯಲ್ಲಿ ನಾಟಕವು ಆಕರ್ಷಕವಾಗಿ ಮೂಡಿಬಂತು. ರಂಗದ ಮೇಲೆ ಗಣಪತಿ ಬಿ.ಹಿತ್ತಲಕೈ, ಪ್ರಶಾಂತ್ ವರದಾಮೂಲ ಸೇರಿದಂತೆ ಅನೇಕ ಕಲಾವಿದರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ರಾಕೇಶ್ ಭಟ್ ಸಂಗೀತ ನಿರ್ವಹಿಸಿದರು. ಗುರುಮೂರ್ತಿ ವರದಾಮೂಲ ಅವರ ರಂಗ ಸಜ್ಜಿಗೆ ಮತ್ತು ಪ್ರಸಾದನ, ಶ್ರೀಧರ ಭಾಗವತ ಅವರ ಬೆಳಕಿನ ಸಂಯೋಜನೆ ಹಾಗೂ ಮುರುಗೇಶ ಬಸ್ತಿಕೊಪ್ಪ ಅವರ ತಾಂತ್ರಿಕ ನಿರ್ವಹಣೆ ನಾಟಕದ ಯಶಸ್ಸಿಗೆ ಪೂರಕವಾಗಿದ್ದವು.

ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ, ಒಮಿ ಸಂಸ್ಥೆಯ ಮಧುಕೇಶ್ವರ ಹೆಗಡೆ ಆಲ್ಮನೆ, ಪತ್ರಕರ್ತ ನಾಗರಾಜ ಮತ್ತಿಗಾರ ಇದ್ದರು. ಪ್ರಜ್ಞಾ ಹೆಗಡೆ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-1092827649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.