ಶಿವಮೊಗ್ಗ: ‘ರಂಗಭೂಮಿ ಮತ್ತು ದೇಸಿ ಜೀವನಕ್ಕೆ ಹತ್ತಿರದ ಸಂಬಂಧವಿದೆ. ದೇಸಿ ಪದ್ಧತಿ ಎಂದರೆ ಆಚಾರದಲ್ಲಿ ತಿದ್ದಿಕೊಳ್ಳದೇ ವಿಚಾರ ಹೇಳುವುದಕ್ಕೆ ಆಗುವುದಿಲ್ಲ ಎಂಬ ಗಾಂಧಿ ತತ್ವವೇ ಆಗಿದೆ’ ಎಂದು ಚಿಂತಕ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು.

ಇಲ್ಲಿನ ಬಹುಮುಖಿಯ 75ನೇ ಕಾರ್ಯಕ್ರಮದಲ್ಲಿ ದೇಸಿ ಚಿಂತನೆ ಬಗ್ಗೆ ಮಾತನಾಡಿದ ಅವರು, ‘ಯಾವುದೇ ನಾಟಕಕ್ಕೆ ನಟ ತನ್ನ ಭಾವವನ್ನು ಅಭಿನಯ ಮತ್ತು ಮಾತಿನ ಮೂಲಕ ನೀಡುತ್ತಾನೆ. ಪ್ರಾಣಿ ಜಗತ್ತಿನಲ್ಲಿ ಮಾನವನಿಗೆ ಮಾತ್ರ ದೊಡ್ಡ ಮೆದುಳಿದೆ. ಹಾಗಾಗಿ ಮನುಷ್ಯ ಸ್ವಲ್ಪ ಅತಿರೇಕಕ್ಕೆ ಹೋಗಿದ್ದಾನೆ’ ಎಂದರು.

ಇಂದು ರಂಗಭೂಮಿಯಲ್ಲಿ ದೇಸಿತನ ಕಡಿಮೆಯಾಗಿದೆ. ಪಂಚೇಂದ್ರಿಯಗಳಲ್ಲಿ ಎಲ್ಲವನ್ನೂ ಬಳಸಿಕೊಂಡು ನಾಟಕ ಕಲಿಸಬೇಕು. ಆದರೆ ಇಂದು ನಾಟಕ ಕಲಿಸುವವರು ಮೊಬೈಲ್ ಫೋನ್ ಬಳಸಿ ಅದರ ಮೂಲಕ ಹೇಳಿಕೊಡುತ್ತಿದ್ದಾರೆ ಎಂದು ತಿಳಿಸಿದರು.

ನಾವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಏಕೆಂದರೆ ಯಾವುದೇ ಪಕ್ಷ ಬಂದರೂ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಪಕ್ಷಗಳು ದಾರಿ ತಪ್ಪಿರುವುದಕ್ಕೆ ಜನರೇ ಕಾರಣರಾಗಿದ್ದಾರೆ ಎಂದರು.

ಕ್ರಿಸ್ತ ಹುಟ್ಟಿ 200 ವರ್ಷದವರೆಗೆ ಧರ್ಮ ಚೆನ್ನಾಗಿತ್ತು. ಆದರೆ ಮುಂದೆ ಕ್ರಿಸ್ತ ಧರ್ಮ ಕೇವಲ ಸಾಂಕೇತಿಕವಾಯಿತು. ಇಂದು ಜಗತ್ತಿನ ಎಲ್ಲಾ ಧರ್ಮವು ತನ್ನ ಮೂಲತತ್ವ ಮರೆತು ಸಾಂಕೇತಿಕ ಧರ್ಮ ಪಾಲಿಸುತ್ತಿವೆ. ಲಿಂಗಾಯತರಿಗೆ ಕಾಯಕ ತತ್ವದ ಬಗ್ಗೆ ಕೇಳಿದರೆ ಪೂಜೆಯ ಬಗ್ಗೆ ಹೇಳುತ್ತಾರೆ. ಆದರೆ ಬಸವಣ್ಣ ಹೇಳಿದ ಕಾಯಕವು ಕೆಲಸದ ಕುರಿತೇ ಆಗಿತ್ತು. ಕನ್ನಡಿಗರು ಇಡೀ ಜಗತ್ತಿಗೇ ಕಾಯಕದ ಮಹತ್ವ ತಿಳಿಸಿದರು. ಇದು ಇಡೀ ಕರ್ನಾಟಕ ಹೆಮ್ಮೆ ಪಡುವ ವಿಷಯವಾಗಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಎಚ್.ಎಸ್.ನಾಗಭೂಷಣ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಬಹುಮುಖಿಯ 75ನೇ ಕಾರ್ಯಕ್ರಮದಲ್ಲಿ ಶ್ರೋತೃಗಳ ಪರವಾಗಿ ನಾಗಭೂಷಣ, ಕೆ.ಜಿ.ವೆಂಕಟೇಶ್, ಕಾಂತೇಶ್ ಕದರಮಂಡಲಗಿ, ಶಂಕರ್ ಮಿತ್ರ ಅವರಿಗೆ ಪುಸ್ತಕ ರೂಪದಲ್ಲಿ ಕಾಣಿಕೆ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-42-69064974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.