ಸಿದ್ದಾಪುರ: ‘ನಾಟಕಗಳು ಭಿನ್ನವಾದ ಭಾವನೆ ಮತ್ತು ಆಲೋಚನೆಗಳನ್ನು ಹುಟ್ಟಿಸುವಂಥ ಶಕ್ತಿ ಹೊಂದಿವೆ. ನಾಟಕಗಳು ಪ್ರಸ್ತುತ ಸಂದರ್ಭದಲ್ಲಿ ಪುರಾಣಗಳ ಮರು ಅವಲೋಕನ ಮಾಡುತ್ತವೆ’ ಎಂದು ನಾಣಿಕಟ್ಟಾದ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾಸಹಕಾರಿ ಸಂಘದ ನಿರ್ದೇಶಕ ವಿ.ಎಂ.ಹೆಗಡೆ ತ್ಯಾಗಲಿ ಹೇಳಿದರು.

ತಾಲ್ಲೂಕಿನ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾಸಹಕಾರಿ ಸಂಘದ ಸಭಾಭವನದಲ್ಲಿ ಒಡ್ಡೋಲಗ ಹಿತ್ಲಕೈ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ಈಚೆಗೆ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಣಿಕಟ್ಟಾದ ಅಗ್ರಗಣ್ಯ ಎಫ್.ಪಿ.ಒ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಪ್ರೌಢಶಾಲಾ ಶಿಕ್ಷಕಿ ಸಂಧ್ಯಾ ಶಾಸ್ತ್ರಿ, ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ವಿಷಯ ಮಂಡಿಸಿದರು.

ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ‘ಸಂಪ್ರದಾಯದ ಮುಸುಕಿನಲ್ಲಿ ಹೆಣ್ಣಿನ ಮೇಲೆ ನಡೆಸಿದ ದಬ್ಬಾಳಿಕೆ ಹೇಸಿಗೆ, ಆಕ್ರೋಶ ಹುಟ್ಟಿಸುವಂಥದ್ದು. ಆಧುನಿಕ ಸಾಹಿತ್ಯ ಮಾತ್ರವಲ್ಲ, ಜಾನಪದದ ಅಲಿಖಿತ ಹಾಡುಗಳಲ್ಲಿ, ವಚನಗಳಲ್ಲಿ ಹೆಣ್ಣಿನ ಪ್ರತಿಭಟನೆಯ ಸೆಳಕುಗಳನ್ನು ಕಾಣಬಹುದು. ಹೆಣ್ಣನ್ನು ದೇವಿಯಾಗಿ ಕಂಡಂತೆ ದುಷ್ಟ ಶಿಕ್ಷಕಿಯಾಗಿಯೂ ಪುರಾಣಗಳು ಕಂಡಿವೆ. ಹೆಣ್ಣು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ’ ಎಂದರು.

ಒಡ್ಡೋಲಗ ಸಂಸ್ಥೆಯ ಅಧ್ಯಕ್ಷ, ರಂಗ ನಿರ್ದೇಶಕ ಗಣಪತಿ ಹೆಗಡೆ ಹಿತ್ಲಕೈ ಇದ್ದರು. ರಂಗಕಲಾವಿದೆ ಪ್ರಜ್ಞಾ ಹೆಗಡೆ ಹಿತ್ಲಕೈ ಸ್ವಾಗತಿಸಿ, ವಂದಿಸಿದರು. ನಂತರ ಶಿರಸಿಯ ಆದರ್ಶ ವನಿತಾ ಸಮಾಜದ ಸದಸ್ಯೆಯರಿಂದ ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿ, ಶ್ರೀಪಾದ ಭಟ್ಟ ನಿರ್ದೇಶಿಸಿದ ನಿನಗೆ ನೀನೇ ಗೆಳತಿ ನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-20-598145014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.