ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಗಮ್ಯ ರಂಗ ಹಬ್ಬದ ನಿಮಿತ್ತ ನಡೆಯುತ್ತಿರುವ ನಾಟಕೋತ್ಸವದ ಮೂರನೇ ದಿನವಾದ ಭಾನುವಾರ ಸಂಜೆ ಪ್ರದರ್ಶನಗೊಂಡ ‘ಮಧುರ ಮಂಡೋದರಿ’ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

ಹಿರಿಯ ಕಲಾವಿದೆ ವನಿತಾ ರಾಜೇಶ್ ನಿರಂತರ ಒಂದು ಗಂಟೆ 15 ನಿಮಿಷ ಎರಡು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದರು. ತಮ್ಮ ಆಂಗಿಕ ಮತ್ತು ಭಾವಾಭಿನಯದಿಂದ ನೋಡುಗರ ಮೆಚ್ಚುಗೆ ಗಳಿಸಿದರು. ವೈಚಾರಿಕ ಮನೋ ಭೂಮಿಕೆಯ ಅಗತ್ಯತೆ ಕುರಿತ ಕಥಾವಸ್ತುವನ್ನು ಹೊಂದಿರುವ ಈ ನಾಟಕ ನೋಡುಗರಗೆ ಮುದ ನೀಡಿತು. ಪ್ರದರ್ಶನದ ಉದ್ದಕ್ಕೂ ಮೆಚ್ಚುಗೆ ವ್ಯಕ್ತವಾಯಿತು.

ಪ್ರಸನ್ನಕುಮಾರ್ ಕೆರಗೋಡು ಅವರು ರಚಿಸಿರುವ ‘ಮಧುರ ಮಂಡೋದರಿ’ ನಾಟಕವನ್ನು ಮಧು ಮಳವಳ್ಳಿ ನಿರ್ದೇಶಿಸಿದರು. ಮಳವಳ್ಳಿಯ ರಂಗಬಂಡಿ ಕಲಾ ತಂಡದ ಕಲಾವಿದರು ನಾಟಕವನ್ನು ಪ್ರಸ್ತುಪಡಿಸಿದರು. ಸುಬ್ರಹ್ಮಣ್ಯ ಸಂಗೀತ ನೀಡಿದರು. ಗಮ್ಯ ತಂಡದ ಮುಖ್ಯಸ್ಥ ಚ. ನಾರಾಯಣಸ್ವಾಮಿ ಕಲಾವಿದರನ್ನು ಅಭಿನಂದಿಸಿದರು.

ಇದಕ್ಕೂ ಮುನ್ನ ಗಮ್ಯ ರಂಗ ಹಬ್ಬದಲ್ಲಿ ರಂಗಕರ್ಮಿ ಪ್ರಸನ್ನ ರಚನೆಯ ‘ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಕೆ. ಶೆಟ್ಟಹಳ್ಳಿ ರಾಜಶೇಖರ್ ಅವರ, ಕೋಮು ಸೌಹಾರ್ದ ಸಾರುವ ‘ನಾವೆಲ್ಲರೂ ಕೂಡಿ ಬಾಳೋಣ’ ನಾಟಕದ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-40-2029961667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.