ಯಲಬುರ್ಗಾ: ‘ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವು ವೈವಿಧ್ಯಮಯ ನಾಟಕಗಳ ಪ್ರದರ್ಶನಗಳ ಮೂಲಕ ಮನಮಾನಸದಲ್ಲಿ ಉಳಿದಿರುವ ಸಹಜಾ ಟ್ರಸ್ಟ್ನ ಕ್ರಿಯಾಶೀಲತೆಯು ರಂಗಭೂಮಿ ಕಲಾಪೋಷಣೆಗೆ ದೊಡ್ಡ ಕೊಡುಗೆ ನೀಡುತ್ತಿದೆ’ ಎಂದು ಹಿರಿಯ ರಂಗಭೂಮಿ ಕಲಾವಿದ ತೇಜನಗೌಡ ಪೊಲೀಸ್ಪಾಟೀಲ ಹೇಳಿದರು.

ತಾಲ್ಲೂಕಿನ ತರಲಕಟ್ಟಿ ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಧಾತ್ರಿ ರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ನಡೆದ ಸಹಜಾ ನಾಟಕೋತ್ಸವ ಹಾಗೂ ಸಹಜಾ ರಂಗ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈಗಾಗಲೇ ಭಕ್ತಿ ಪ್ರಧಾನ, ಸಾಮಾಜಿಕ ಹಾಗೂ ಇನ್ನಿತರ ನಾಟಕಗಳ ಪ್ರದರ್ಶನ ಮೂಲಕ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದು ಹೇಳಿದರು.

ಮಕ್ಕಳ್ಳಿ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಕೊಪ್ಪಳದ ಸಹಜಾ ಟ್ರಸ್ಟ್ ರಂಗಭೂಮಿ ಸಲ್ಲಿಸುತ್ತಿರುವ ಸೇವೆಯು ಅನನ್ಯವಾಗಿದೆ. ಸಂಸ್ಥೆಗೆ ಇನ್ನಷ್ಟು ನೆರವು ಅಗತ್ಯವಿದೆ. ರಂಗಭೂಮಿ ಕಲಾ ಕ್ಷೇತ್ರದಲ್ಲಿ ಸುಮಾರು ವರ್ಷಗಳವರೆಗೆ ರಂಗಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಮೆಚ್ಚುವಂತಹ ಕಾರ್ಯ’ ಎಂದು ಹೇಳಿದರು.

ಶಿರಗೇರಿಯ ಧಾತ್ರಿ ರಂಗ ಸಂಸ್ಥೆಯ ಕಲಾವಿದರಿಂದ ಶಿವಶರಣ ಹರಳಯ್ಯ ಭಕ್ತಿ ಪ್ರಧಾನ ನಾಟಕ ಹಾಗೂ ಸಂಸಾರದಲ್ಲಿ ಸನಿದಪ ಸಾಮಾಜಿಕ ನಾಟಕ ಪ್ರದರ್ಶನಗಳು ಗಮನ ಸೆಳೆದವು.

ಪ್ರಶಸ್ತಿ ಪುರಸ್ಕೃತರು: ತೇಜನ ಗೌಡ ಪೊಲೀಸ್ಪಾಟೀಲ, ಪ್ರಭು ಗೌಡ ಪೊಲೀಸ್ಪಾಟೀಲ, ರಂಗನಗೌಡ ಮಾಲಿಪಾಟೀಲ, ಯಮನೂರಪ್ಪ ಕಂಬಳಿ, ಮಲ್ಲನಗೌಡ ಪೊಲೀಸ್ಪಾಟೀಲ, ಶ್ರೀಕಾಂತಗೌಡ ಮಾಲಿಪಾಟೀಲ, ಲೋಕೇಶ ನಾಯ್ಕ ಅವರಿಗೆ ಸಹಜಾ ಟ್ರಸ್ಟ್ ವತಿಯಿಂದ ಸಹಜ ರಂಗ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.

ಕೊಪ್ಪಳದ ಸಹಜಾ ಟ್ರಸ್ಟ್ ಕಾರ್ಯದರ್ಶಿ ಶಿಲಾ ಹಾಲ್ಕುರಿಕೆ, ಸ್ಥಳೀಯ ಕಲಾವಿದ ವೀರೇಶ ನಾಯಕ, ಪರಮೇಶಗೌಡ್ರ, ಮುಖಂಡರುರಾದ ಟಾಕನಗೌಡ ಮಾಲಿಪಾಟೀಲ, ಹನಮಂತಪ್ಪ ತಳವಾರ, ಯಮನೂರಪ್ಪ ತಳವಾರ, ಶಿವನಗೌಡ ಮಾಲಿಪಾಟೀಲ, ಫಕೀರಗೌಡ ಮಾಲಿಪಾಟೀಲ, ಕಾಳೇಶ ಕಮ್ಮಾರ, ವೆಂಕೋಬ ನಾಯ್ಕ, ಹನುಮಗೌಡ ಮಾಲಿಪಾಟೀಲ, ಹನುಮಂತಪ್ಪ ಕಮ್ಮಾರ, ಗುನ್ನೆಪ್ಪ ಚನ್ನದಾಸರ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-35-935326447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.