ಯಲ್ಲಾಪುರ: ಇಟಗಿಯ ಶ್ರೀ ಗುರು ಕಾಂತೇಶ್ವರ ನಾಟ್ಯ ಸಂಘದ ಕಲಾವಿದರು ಪಟ್ಟಣದಲ್ಲಿ ಮೇ 1 ರಿಂದ 3ರವರೆಗೆ ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ಸಂಘದ ಮಾಲಿಕ ಪಂಚಾಕ್ಷರಿ ಹೂಗಾರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಪಟ್ಟಣದಲ್ಲಿ ದಿನವೂ ಎರಡು ಪ್ರದರ್ಶನ ನಡೆಯುತ್ತಿದೆ. ಮೇ 1 ರಿಂದ 3ರವರೆಗೆ ‘ಹಳ್ಳಿ ಹುಡುಗಿ ಮಸರ ಗಡಗಿ’ ಅರ್ಥಾತ್ ಕೈಲಾಗದ ಗಂಡ ಕೈಲಾಸ ಕಂಡ ನಾಟಕ ಪ್ರದರ್ಶನವಿದೆ. ಹಾಸ್ಯನಟ ಹರೀಶ ಹಿರಿಯೂರು, ಪ್ರಿಯಾ ಹಿರಿಯೂರು, ಮಂಗಳೂರು ಮೀನನಾಥ, ನಿವೃತ್ತ ಎಸ್ಐ ಶ್ಯಾಂರಾಜ ಸಜ್ಜನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕು ಎಂದು ಅವರು ತಿಳಿಸಿದರು. ಹಿರಿಯ ಕಲಾವಿದ ನಾಗರಾಜ ಗೋಕಾಕ, ರಾಯಣ್ಣ ದಾವಣಗೆರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-20-1391329061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.