ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮಾಡದ ತಪ್ಪಿಗೆ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾಳೆ.

ಕುಟುಂಬದ ಹಿರಿಯ ಧರ್ಮರಾಜ್ಗೆ ಅನಾಮಿಕ ವ್ಯಕ್ತಿಯು ಬೆದರಿಕೆ ಹಾಕುತ್ತಿದ್ದನು. ಅದರಪರಿಣಾಮ ಈಗ, ಧರ್ಮರಾಜ್ಗೆ ಹೃದಯಘಾತವಾಗಿದೆ. ಇದರಿಂದ ಬೇಸರಗೊಂಡ ಕುಟುಂಬಸ್ಥರು ‘ಮನೆಯ ನೆಮ್ಮದಿ ಹಾಳಾಗಲು ಲಕ್ಷ್ಮಿಯೇ ನೆರ ಹೊಣೆ‘ ಎಂದು ಆಕೆಯನ್ನು ದೂಷಿಸಿದ್ದರು.

ಆಸ್ಪತ್ರೆಯಲ್ಲಿರುವ ಧರ್ಮರಾಜ್ನನ್ನು ಲಕ್ಮ್ಮೀ ನೋಡಲು ಹೋದಾಗ ಆದಿ ತಾಯಿ ಅವಳನ್ನು ಮನೆ ಬಿಟ್ಟುಹೋಗುವಂತೆ ಗದರಿದ್ದಾಳೆ. ಇದಕ್ಕೆ ಬೇಸರಗೊಂಡ ಲಕ್ಷ್ಮೀ ಮನೆ ಬಿಟ್ಟು ಸ್ನೇಹಿತರ ಜೊತೆಯಲ್ಲಿ ಉಳಿದುಕೊಂಡಿದ್ದಾಳೆ.

ಇತ್ತ, ಆದಿ ಸಹೋದರಿ ಅಮೃತಾ ಹಾಗೂ ಸಂಜೀವ್ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ.

ಸದ್ಯ, ಧರ್ಮರಾಜ್ಗೆ ಪ್ರಜ್ಞೆ ಬಂದಿದೆ. ದುಖಃದಲ್ಲೇ ಮುಳುಗಿದ್ದ ಆದಿ ಅಜ್ಜಿಗೆ ಈಗ ಲಕ್ಮ್ಮೀ ವಿಚಾರ ತಿಳಿದು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಮರ್ಯಾದೆಗಾಗಿ ಲಕ್ಷ್ಮೀಯು ಪತಿಯ ಮನೆಗೆ ವಾಪಾಸ್ಸು ಬರುತ್ತಾಳಾ ಅಥವಾ ತವರು ಮನೆಯಲ್ಲೇ ಇರಲು ನಿರ್ಧರಿಸುತ್ತಾಳಾ ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.