ಸೂರ್ಯವಂಶ ಧಾರಾವಾಹಿಯು ಮುಕ್ತಾಯದ ಹಂತದಲ್ಲಿದೆ. ಈ ಧಾರಾವಾಹಿಯಲ್ಲಿ ಸೂರ್ಯವರ್ಧನ್ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟ ಅನಿರುದ್ಧ ಜತ್ಕರ್ ಅವರು ಭಾವುಕ ಪೋಸ್ಟ್ ಹಂಚಿಕೊಂಡು ವಿದಾಯ ಹೇಳಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡ ಅನಿರುದ್ಧ ಅವರು , ‘ಸೂರ್ಯವಂಶ’ ಧಾರಾವಾಹಿಯನ್ನು ನಾವು ಮುಕ್ತಾಯಗೊಳಿಸುತ್ತಿದ್ದೇವೆ. ಮಾರ್ಚ್ 21ರಂದು ಕೊನೆಯ ಭಾಗ ಪ್ರಸಾರವಾಗಲಿದೆ. ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು. ಆದರೆ ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ 650 ಕಂತುಗಳನ್ನು ಪೂರ್ಣಗೊಳಿಸಿದೆ. ಹೊಸ ಧಾರಾವಾಹಿಗೆ ಅವಕಾಶ ನೀಡುವ ಉದ್ದೇಶದಿಂದ ಚಾನೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ‘ ಎಂದಿದ್ದಾರೆ.
.‘ಕೆಡಿ’ ಚಿತ್ರದ ಐಟಂ ಡ್ಯಾನ್ಸ್ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ .
ಈ ಅದ್ಭುತ ತಂಡವು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಂಡಿದ್ದು, ಚಾನೆಲ್ನ ಎಲ್ಲರ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಸಂತೋಷ ಮತ್ತು ಗೌರವದ ವಿಷಯವಾಗಿತ್ತು. ಈ ಧಾರಾವಾಹಿಯನ್ನು ನೋಡಿ ನಿರಂತರವಾಗಿ ಬೆಂಬಲ ನೀಡಿದ ನನ್ನ ಎಲ್ಲ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತುಂಬಾ ಬೇಗನೇ ಹೊಸ ಪ್ರಾಜೆಕ್ಟ್ ಮತ್ತು ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇನೆ‘ ಎಂದು ಬರೆದುಕೊಂಡು ವಿದಾಯ ಹೇಳಿದ್ದಾರೆ.

ಅನಿರುದ್ಧ ಅವರು ‘ಜೇಷ್ಠ, ‘ನೀನೆಲ್ಲೋ ನಾನಲ್ಲೆ ’,‘ತುಂಟಾ’, ‘ರಾಜ ಸಿಂಹ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಗೂ ‘ಜೊತೆ ಜೊತೆಯಲಿ’. ಧಾರಾವಾಹಿಯಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.