‘ಪಂಚಾಯತಿ’ ಎಂಬ ಜನಪ್ರಿಯ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಕರ್ನಾಟಕದಲ್ಲಿನ ಜಾತಿ ವ್ಯವಸ್ಥೆಯ ಕುರಿತು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡಿರುವ ವಿನೋದ್ ಸೂರ್ಯವಂಶಿ ‘ಕರ್ನಾಟಕದ ನನ್ನ ಹಳ್ಳಿಯಲ್ಲಿ ಇಂದಿಗೂ ಜಾತೀಯತೆ ಪ್ರಚಲಿತದಲ್ಲಿದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ತಮ್ಮ ಊರು ಯಾವುದು ಎಂದು ಬಹಿರಂಗ ಪಡಿಸಿಲ್ಲ.

ತಮ್ಮ ಊರಿನ ಕುರಿತು ಮಾತನಾಡಿರುವ ಅವರು, ‘ನನ್ನ ಹುಟ್ಟೂರು 2 ಭಾಗಗಳಿಂದ ಕೂಡಿದೆ. ಒಂದು ಮೇಲ್ಜಾತಿ, ಇನ್ನೊಂದು ಕೆಳಜಾತಿಯಾಗಿದೆ. ಈ ಎರಡು ಜಾತಿಯವರು ಪ್ರತ್ಯೇಕವಾಗಿ ವಾಸಿಸುತ್ತಾರೆ’ ಎಂದು ಹೇಳಿದ್ದಾರೆ.

ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ವಿನೋದ್ ಸೂರ್ಯವಂಶಿ ‘ನನಗೆ 12 ವರ್ಷ ಇದ್ದಾಗ ನನ್ನ ತಂದೆಯೊಂದಿಗೆ ಹಳ್ಳಿಗೆ ಹೋಗಿದ್ದೆ. ನಾವು ಅಲ್ಲಿನ ಹೋಟೆಲ್ನಲ್ಲಿ ಊಟ ಮಾಡಿದಾಗ ನಮ್ಮ ತಟ್ಟೆಗಳನ್ನು ನಾವೇ ತೊಳೆಯಬೇಕಾಗಿತ್ತು. ಇಂದಿಗೂ ನನ್ನ ಹಳ್ಳಿಯಲ್ಲಿ ಒಂದು ದೇವಾಲಯವಿದೆ. ಆ ದೇವಾಲಯಕ್ಕೆ ನಮ್ಮ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದಿದ್ದಾರೆ.

’ನನ್ನ ಮೈಬಣ್ಣ ಕಪ್ಪು ಇದ್ದ ಕಾರಣ ಹಲವು ಬಾರಿ ಇತರರಿಂದ ತಿರಸ್ಕಾರಕ್ಕೆ ಒಳಗಾದೆ. ನಾನು ಕೆಲ ಆಡಿಷನ್ಗಳಲ್ಲಿ ಭಾಗವಹಿಸಿದಾಗಲೂ ಇದೇ ಮೈಬಣ್ಣದ ಕಾರಣಕ್ಕೆ ಆಯ್ಕೆಯಾಗುತ್ತಿರಲಿಲ್ಲ. ನನ್ನ ತಾಯಿ ಮನೆ ಕೆಲಸ ಮಾಡುತ್ತಿದ್ದರು. ತಂದೆ ಮೇಸ್ತ್ರಿಯಾಗಿದ್ದರು. ಅವರಿಗೆ ಪ್ರತಿದಿನ ಕೆಲಸ ಸಿಗುತ್ತಿರಲಿಲ್ಲ. ಕೆಲಸವಿಲ್ಲದ ದಿನ ತಂದೆ ಕುಡಿದು ಮನೆಗೆ ಬರುತ್ತಿದ್ದರು. ಆಗ ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ನಾನು ನನ್ನ ತಂದೆಯನ್ನು ಎಂದಿಗೂ ದ್ವೇಷಿಸಲಿಲ್ಲ. ಆದರೆ ಅವರ ನಡವಳಿಕೆ ನನಗೆ ಇಷ್ಟವಾಗುತ್ತಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ವಿನೋದ್ ಸೂರ್ಯವಂಶಿ ಅವರು ‘ಜಾನ್ವಾರ್’, ‘ಥಾಮ’, ‘ಸತ್ಯಮೇವ್ ಜಯತೆ’ ಮತ್ತು ‘ಜಾಲಿ ಎಲ್ಎಲ್ಬಿ 3’ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.