‘ಕರ್ಣ’ ಧಾರಾವಾಹಿ ನಟಿ ಅಂಕಿತಾ ಜಯರಾಮ್ ಅವರು ನಟನೆ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 97 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ‘ಭಗವಂತ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವಿತೀಯ ಪಿಯುಸಿಯಲ್ಲಿ ಶೇ 97 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾದ ನಿಮ್ಮ ಪ್ರೀತಿಯ ಅಂಕಿತ. ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ’ ಎಂದು ಬರೆದುಕೊಂಡು ಸಂಭ್ರಮಿಸಿದ್ದಾರೆ.

ಯಾವ ವಿಷಯದಲ್ಲಿ ಎಷ್ಟು ಅಂಕ?

ಎಸ್ಎಸ್ಎಲ್ಸಿಯಲ್ಲಿ 95% ಅಂಕ ಗಳಿಸಿದ್ದ ಅಂಕಿತಾ ಜಯರಾಮ್ ಅವರು ಪಿಯುಸಿನಲ್ಲಿ ವಾಣಿಜ್ಯ ವಿಭಾಗ ಆಯ್ದುಕೊಂಡಿದ್ದರು. ಇದೀಗ ಬಂದಿರುವ ಫಲಿತಾಂಶದಲ್ಲಿ

ಕನ್ನಡ - 97

ಇಂಗ್ಲೀಷ್ - 94

ಬಿಸಿನೆಸ್ ಸ್ಟಡೀಸ್ - 98

ಅಕೌಂಟೆನ್ಸಿ - 96

ಸ್ಟಾಟಿಸ್ಟಿಕ್ಸ್ - 100

ಕಂಪ್ಯೂಟರ್ ಸೈನ್ಸ್ - 94

ಅಂಕಿತಾ ಜಯರಾಮ್ ಅವರು ಒಟ್ಟಾರೆ 600 ಅಂಕಗಳಿಗೆ 579 ಅಂಕಗಳನ್ನ ಗಳಿಸುವ ಮೂಲಕ 97% ಫಲಿತಾಂಶ ಗಳಿಸಿದ್ದಾರೆ .

ಅಂಕಿತಾ ಅವರು ‘ಭೂಮಿಗೆ ಬಂದ ಭಗವಂತ‘ ಧಾರಾವಾಹಿಯಲ್ಲಿ ಪ್ರಣೀತಾ ಪಾತ್ರ, ‘ಕಾಗದ’ ಚಿತ್ರದಲ್ಲಿ ಪ್ರಣಿತಾ ಆಗಿ, ‘ವೇದ’, ‘ಯುವರತ್ನ’, ಭರಾಟೆ’ ಚಿತ್ರಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ, ಅವರು ‘ಕರ್ಣ’ ಧಾರಾವಾಹಿಯಲ್ಲಿ ರಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟನೆ ಬಿಡುವಿನಲ್ಲೂ ಉತ್ತಮ ಅಂಕ ಗಳಿಸಿರುವುದಕ್ಕೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.