ಕನ್ನಡದ 'ವಧು' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ದುರ್ಗಶ್ರೀ ಅವರು ನಟನೆಯಿಂದ ದೂರ ಉಳಿದಿರುವ ಬಗ್ಗೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ಅವರು ತೆಲುಗಿನ ‘ಸಂಧ್ಯಾ ರಾಗಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಸಿರಿಯಲ್ಗೆ ಒಂದು ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ನಟಿ ದುರ್ಗಶ್ರೀ ಅವರು ಹೊರಬಂದಿರುವ ಕುರಿತು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

‘ನೀವು ಚೆನ್ನಾಗಿ ನಟನೆ ಮಾಡುತ್ತಿದ್ದಿರಿ. ಯಾಕೆ ಆ ತಂಡದಿಂದ ಹೊರಬಂದಿದ್ದು.? ಎಂದು ಅನೇಕರು ನನಗೆ ಕೇಳಿದ್ದರು. ಈ ತಂಡದ ಕಲಾವಿದರು ತುಂಬಾ ಒಳ್ಳೆಯವರು. ಇದು ನನ್ನ ಕನಸಿನ ಯೋಜನೆ ಆಗಿತ್ತು. ನಾನು ಧಾರಾವಾಹಿಯ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. ಈ ತಂಡದವರ ಜೊತೆ ಮಾತನಾಡಿ ಹೊರಬಂದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಆದರೆ, ಆರೋಗ್ಯ ಸರಿ ಇಲ್ಲದ ಕಾರಣ ಹೈದರಾಬಾದ್ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಕೂಡಲೆ ಆಸ್ಪತ್ರೆಗೆ ದಾಖಲಾದೆ. ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಾಶಯದಲ್ಲಿ ಗಂಟು (Uterus Cyst) ಇರುವುದು ಪತ್ತೆಯಾಯಿತು. ಬಳಿಕ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. 21 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ'. ಆ ಸಮಯದಲ್ಲಿ ‘ಸಂಧ್ಯಾ ರಾಗಂ’ ಧಾರಾವಾಹಿ ತಂಡ ನನಗೆ ಸಂಪೂರ್ಣ ಪೋತ್ರಾಹ ನೀಡಿತ್ತು. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ನೇತ್ರಾವತಿ’, ಕಲರ್ಸ್ ಕನ್ನಡದ ‘ನಿಮ್ಮ ವಧು’, ಸ್ಟಾರ್ ಮಾ ವಾಹಿನಿಯ ‘ರುಕ್ಮಿಣಿ’ ಧಾರಾವಾಹಿ ಜೊತೆಗೆ ಕನ್ನಡದ ‘ರಿದಮ್ ಆಫ್ ಲವ್’ ವೆಬ್ ಸೀರಿಸ್ನಲ್ಲೂ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.