ಸ್ನೇಹಿತರ ವಿವಾಹದ ಚಿತ್ರಗಳನ್ನು ಹಂಚಿಕೊಂಡ ಮೌನ,‘ಕೊಡವ ಶೈಲಿಯ ಮದುವೆ ಬೇರೆಯ ವಾತಾವರಣವನ್ನು ನೀಡುತ್ತದೆ. ಸಾಂಪ್ರದಾಯಿಕ ಆಚರಣೆ, ಸುತ್ತಲೂ ಇದ್ದ ನಗುಮೊಗಗಳು, ರುಚಿಕರವಾದ ಊಟ, ಸುಂದರ ವಾತಾವರಣದಿಂದ ಕೂಡಿದ ಮರೆಯಲಾಗದ ಅದ್ಭುತ ಸಂಭ್ರಮವಿದು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ನಿಜವಾಗಿಯೂ ತುಂಬಾ ಖುಷಿಯಾಯಿತು’ ಎಂದು ಬರೆದುಕೊಂಡಿದ್ದಾರೆ.