ಶುಕ್ರವಾರ, ಡಿಸೆಂಬರ್ 13, 2019
24 °C

ಕ್ರಿಕೆಟ್‌ ಜಗತ್ತಿನ ಕರಾಳ ಮುಖ ತೆರೆದಿಟ್ಟ ಇನ್‌ಸೈಡ್‌ ಎಡ್ಜ್‌–2 ಟ್ರೈಲರ್‌ ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆಜಾನ್ ಪ್ರೈಂ ಒರಿಜಿನಲ್‌ ವೆಬ್‌ ಸಿರೀಸ್‌ ‘ಇನ್‌ಸೈಡ್‌ ಎಡ್ಜ್‌–2‘ ಟ್ರೈಲರ್‌ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಐಪಿಎಲ್‌ ಪಂದ್ಯಾವಳಿಗಳ ಹಿಂದಿನ ಭ್ರಷ್ಟಾಚಾರ, ರಾಜಕಾರಣ, ಡ್ರಗ್ಸ್‌, ಸೆಕ್ಸ್‌ ಮತ್ತು ಅಪರಾಧಗಳ ಮೇಲೆ ಬೆಳಕು ಚೆಲ್ಲುವ ಕಾಲ್ಪನಿಕ ಕಥಾ ಹಂದರವನ್ನು ಇನ್‌ಸೈಡ್‌ ಎಡ್ಜ್‌ ಒಳಗೊಂಡಿದೆ. ಐಪಿಎಲ್‌ ಆರಂಭವಾದ ನಂತರ ಕ್ರಿಕೆಟ್‌ ಆಟದ ಹಿಂದಿನ ಪರಿಭಾಷೆಗಳು ಬದಲಾದದ್ದು ನಮಗೆಲ್ಲ ತಿಳಿದೇ ಇದೆ. ಕ್ರಿಕೆಟ್‌ ಜಗತ್ತಿನಲ್ಲಾದ ಕ್ಷೀಪ್ರ ಬೆಳವಣಿಗೆಗಳ ಹಿಂದಿನ ಕರಾಳ ಮುಖವನ್ನು ತೆರೆದಿಡುವುದು ಇನ್‌ಸೈಡ್‌ ಎಡ್ಜ್‌ ಸಿರೀಸ್‌ನ ಉದ್ದೇಶವಾಗಿದೆ. 

ಈ ಹಿಂದೆ ಅಮೆಜಾನ್ ಪ್ರೈಂ ಸಂಸ್ಥೆಯು ಇನ್‌ಸೈಡ್‌ ಎಡ್ಜ್‌–1 ಅನ್ನು ಬಿತ್ತರಿಸುವುದರ ಮೂಲಕ ಭಾರತದ ಮೊದಲ ಒರಿಜಿನಲ್ ವೆಬ್‌ ಸಿರೀಸ್‌ಗೆ ನಾಂಧಿ ಹಾಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಇನ್‌ಸೈಡ್‌ ಎಡ್ಜ್‌–1 ವೆಬ್‌ ಸಿರೀಸ್‌ ಪಾತ್ರವಾಗಿತ್ತು. 

ಮೊದಲ ಸಿರೀಸ್‌ನಲ್ಲಿ ನಟಿಸಿದ್ದ ವಿವೇಕ್‌ ಒಬಿರಾಯ್‌, ರಿಚಾ ಚಡ್ಡಾ, ಸಿದ್ದಾಂತ್‌ ಚತುರ್ವೇದಿ, ತನುಜ್‌ ವಿರ್ಮಾನಿ ಮತ್ತು ಅಂಗದ್‌ ಬೇಡಿ ಅವರು ಎರಡನೇ ಸಿರೀಸ್‌ನಲ್ಲಿಯೂ ನಟಿಸಿರುವುದು ಗಮನಾರ್ಹ. 

ಇನ್‌ಸೈಡ್‌ ಎಡ್ಜ್‌–2 ಸಿರೀಸ್‌ ಡಿಸೆಂಬರ್‌ 6 ರಂದು ಬಿಡುಗಡೆಗೊಳ್ಳುವುದಾಗಿ ಅಮೆಜಾನ್ ಪ್ರೈಂ ಹೇಳಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು