ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಕಥೆ ಜೀ ಕನ್ನಡದಲ್ಲಿ

Last Updated 25 ಜೂನ್ 2020, 15:57 IST
ಅಕ್ಷರ ಗಾತ್ರ

ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನವನ್ನು ತೆರೆಯ ಮೇಲೆ ಕಟ್ಟಿಕೊಡುವ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಜುಲೈ 4ರಿಂದ ಆರಂಭವಾಗಲಿದೆ.

ಇದು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಪ್ರಸಾರ ಆಗಲಿದೆ. ಹಿಂದಿಯಲ್ಲಿ ಈಗಾಗಲೇ ಇದು ಪ್ರಸಾರ ಆಗಿದ್ದು, ಇದನ್ನು ಡಬ್ ಮಾಡಿ ಕನ್ನಡದ ವೀಕ್ಷಕರ ಮುಂದಿರಿಸಲಾಗುತ್ತದೆ ಎಂದು ವಾಹಿನಿಯ ಮೂಲಗಳು ತಿಳಿಸಿವೆ.

‘ಭಾರತದ ಸಂವಿಧಾನ ನಿರ್ಮಾತೃ, ಅಸಾಧಾರಣ ನಾಯಕ ಅಂಬೇಡ್ಕರ್ ಅವರ ಜೀವನದ ಕಥೆಯು ಧಾರಾವಾಹಿ ರೂಪದಲ್ಲಿ ಪ್ರಸಾರ ಆಗಲಿರುವುದು ಕನ್ನಡ ಕಿರುತೆರೆ ವಾಹಿನಿ ಇತಿಹಾಸದಲ್ಲಿ ಇದೇ ಮೊದಲು’ ಎಂದು ವಾಹಿನಿ ಹೇಳಿಕೊಂಡಿದೆ.

‘ಜನ ಬಯಸುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಮುಂಚೂಣಿಯಲ್ಲಿ ಇರುವ ನಮ್ಮ ವಾಹಿನಿಯು ಇದೀಗ ಅಂಬೇಡ್ಕರ್ ಜೀವನಕ್ಕೆ ಸಂಬಂಧಿಸಿದ ಧಾರಾವಾಹಿ ಪ್ರಸಾರ ಮಾಡಲು ತೀರ್ಮಾನಿಸಿದೆ. ಇದೊಂದು ಮಹತ್ವದ ಹೆಜ್ಜೆ. ಎಲ್ಲ ವೀಕ್ಷಕರಿಗೆ ಇದು ಇಷ್ಟವಾಗುತ್ತದೆ ಎಂಬುದು ನಮ್ಮ ನಂಬಿಕೆ’ ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.

ಈ ಧಾರಾವಾಹಿಯು ‘ಏಕ್ ಮಹಾನಾಯಕ್‌’ ಹೆಸರಿನಲ್ಲಿ ಜೀ5 ಒಟಿಟಿ ವೇದಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಈಗ ಲಭ್ಯವಿದೆ. ಇದರ 74 ಕಂತುಗಳನ್ನು ಈ ವೇದಿಕೆ ಮೂಲಕ ವೀಕ್ಷಿಸಬಹುದು. ‘ಅಂಬೇಡ್ಕರ್ ಅವರ ಪೂರ್ತಿ ಜೀವನದ ಕಥೆಯನ್ನು ಇನ್ನೂ ಚಿತ್ರೀಕರಿಸಿ ಆಗಿಲ್ಲ. ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಈಗ ಲಭ್ಯವಿರುವ ಕಂತುಗಳನ್ನು ಕನ್ನಡಕ್ಕೆ ಡಬ್ ಮಾಡಿ, ಜೀ ಕನ್ನಡ ವಾಹಿನಿಯು ಧಾರಾವಾಹಿಯ ಪ್ರಸಾರ ಆರಂಭಿಸಲಿದೆ. ಮುಂದಿನ ಕಂತುಗಳು ಲಭ್ಯವಾದಂತೆಲ್ಲ ಅವುಗಳನ್ನೂ ಡಬ್ ಮಾಡಿ ಪ್ರಸಾರ ಮಾಡಲಾಗುತ್ತದೆ ಎಂದು ವಾಹಿನಿಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT