ಜೈದೇವ್ ಮೋಸದ ಬಲೆಯಲ್ಲಿ ಗೌತಮ್ ಪುತ್ರಿ ಮಿಂಚು ಸಿಲುಕಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಮೃತಧಾರೆ’ ಧಾರಾವಾಹಿ ರೋಚಕ ಘಟ್ಟ ತಲುಪಿದೆ.

ಗೌತಮ್– ಭೂಮಿಕಾ ನೆಮ್ಮದಿ ಕೆಡಿಸಲು ಜೈದೇವ್ ನಾನಾ ಕಸರತ್ತು ಮಾಡುತ್ತಿದ್ದ. ಇತ್ತ, ಗೌತಮ್ ಸಹೋದರಿ ಮಹಿಮಾ ತನಗೆ ಮಕ್ಕಳಿಲ್ಲ ಎಂಬ ಕೊರಗಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಅವಳ ಆರೋಗ್ಯವನ್ನು ಸರಿಪಡಿಸಲು ನಾವು ಕೈ ಜೋಡಿಸುತ್ತೇವೆ ಎಂದು ಗೌತಮ್ ಭರವಸೆ ನೀಡಿದ್ದಾರೆ.

ಅದರ ಸಲುವಾಗಿ ಗೌತಮ್ ಪುತ್ರಿ ಮಿಂಚುಳನ್ನು ಸಹೋದರಿ ಮಹಿಮಾಳಿಗೆ ದತ್ತು ನೀಡುವ ನಿರ್ಧಾರ ಮಾಡಿದ್ದಾರೆ. ಆದರೆ ಈ ನಿರ್ಧಾರಕ್ಕೆ ಮಿಂಚು ಒಪ್ಪಿಲ್ಲ.

ಒಂದಿಷ್ಟು ವರ್ಷಗಳ ಕಾಲ ಗೌತಮ್, ಭೂಮಿಕಾ ದೂರ ಆಗಿದ್ದರು. ಆ ವೇಳೆ ಯಾರೋ ಬಿಟ್ಟು ಹೋದ ಮಗು ಮಿಂಚುಳನ್ನು ಗೌತಮ್ ಅವರು ಸಾಕಿ ಬೆಳೆಸಿದ್ದರೆ, ಪುತ್ರ ಆಕಾಶ್ನನ್ನು ಭೂಮಿಕಾ ಸಾಕಿದ್ದಳು. ಕೆಲವು ವರ್ಷಗಳ ಬಳಿಕ ಭೂಮಿಕಾ ಹಾಗೂ ಗೌತಮ್ ಮತ್ತೆ ಒಂದಾಗಿ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿರುತ್ತಾರೆ.

ಆದರೆ, ಈ ಸುಂದರ ದಾಂಪತ್ಯವನ್ನು ಸಹಿಸದ ಸಹೋದರ ಜೈದೇವ್ ಅವರಿಗೆ ಪದೇ ಪದೇ ತೊಂದರೆ ಕೊಡುತ್ತಲೇ ಇದ್ದ. ಇದರ ನಡುವೆಯೂ ಮಿಂಚು, ಗೌತಮ್ ಸ್ವಂತ ಮಗಳೆಂಬ ಸತ್ಯ ಅವನಿಗೆ ಗೊತ್ತಾಗಿದೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ಅರಿವು ಇರದ ಗೌತಮ್ – ಭೂಮಿಕಾ ಬಾಲ್ಯದಲ್ಲಿ ಕಳೆದ ಹೋದ ಮಗಳನ್ನು ಹುಡುಕುತ್ತಲೇ ಇದ್ದಾರೆ.

ಮಹಿಮಾಳಿಗೆ ದತ್ತು ಕೊಡುತ್ತಾರೆ ಎಂಬ ಕಾರಣಕ್ಕೆ ಮಿಂಚು ಮನೆಯಿಂದ ತಪ್ಪಿಸಿಕೊಂಡು ಹೋಗುವ ಯೋಚನೆ ಮಾಡಿ, ಸ್ಕೂಲ್ಗೆ ಹೋಗುವ ಬದಲು ಗೊತ್ತಿರದ ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗಿದ್ದಾಳೆ. ಆ ವೇಳೆ ಅವಳಿಗೆ ಜೈದೇವ್ ಎದುರಾಗಿದ್ದಾನೆ.

ಮಿಂಚು ಬಳಿ ಗೌತಮ್, ಭೂಮಿಕಾ ಬಗ್ಗೆ ತಪ್ಪಾಗಿ ಹೇಳಿ ಅವಳ ಮನ ಮನವರ್ತನೆ ಆಗುವಂತೆ ಮಾಡಿದ್ದಾನೆ. ಅವನ ಮಾತಿನ ಹಿಂದಿರುವ ಕ್ರೂರ ಮುಖದ ಬಗ್ಗೆ ಅರಿವು ಇರದ ಮಿಂಚು ಅವನನ್ನು ನಂಬಿ ಅವನ ಜೊತೆ ಹೋಗಿದ್ದಾಳೆ.

ಜೈದೇವ್ ಬಲೆಯಲ್ಲಿರುವ ಮಿಂಚುಳನ್ನು ಗೌತಮ್, ಭೂಮಿಕಾ ಕಾಪಾಡಿಕೊಳ್ಳುತ್ತಾರಾ ಎಂಬುವುದು ಮುಂದಿನ ಸಂಚಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.